ಸಿವಿಲ್ ಇಂಜಿನಿಯರ್ ರಾಮಚಂದ್ರ ಪೆಡ್ನೇಕರ ಅವರ ಮೃತದೇಹ ಪಿಎಲ್‌ಡಿ ಬ್ಯಾಂಕಿನ ಬಾವಿಯಲ್ಲಿ ಪತ್ತೆ.

ಅಂಕೋಲಾ : ಸಿವಿಲ್ ಇಂಜಿನಿಯರ್ ರಾಮಚಂದ್ರ ಬಾಬಣಿ ಪೆಡ್ನೇಕರ (58) ಅವರ ಮೃತ ದೇಹವು ಪಟ್ಟಣದ ಬಂಡಿಕಟ್ಟೆಯ ಎದುಗಿರುವ ಪಿ.ಎಲ್.ಡಿ. ಬ್ಯಾಂಕಿನ ಆವಾರದಲ್ಲಿರುವ ಬಾವಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

       ಇದು ಆತ್ಮಹತ್ಯೆಯೋ ಅಥವಾ ಇನ್ನಿತರ ಕಾರಣಗಳಿಂದಾಗಿ ಇತನ ಸಾವು ಸಂಭವಿಸಿದೆಯೋ ಎಂದು ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ. ಪಿಎಲ್‌ಡಿ ಬ್ಯಾಂಕಿನ ಸಿಬ್ಬಂದಿ ಬಾವಿಗೆ ನೀರು ತರಲು ಬಂದಾಗ ಬಾವಿಯಲ್ಲಿ ಮೃತದೇಹವಿರುವದನ್ನು ಕಂಡು ಹೌಹ್ಹಾರಿದ್ದಾರೆ. ಕೂಡಲೆ ವಿಷಯವನ್ನು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ.

       ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಬಳಿಯ ವಾಸವಾಗಿರುವ ರಾಮಚಂದ್ರ ಪೆಡ್ನೇಕರ ಅವರು ಪಟ್ಟಣ ಪಂಚಾಯತದ ಇಂಜಿನಿಯರ್ ಆಗಿಯೂ ಕೆಲ ಕಾಲ ಕಾರ್ಯ ನಿರ್ವಹಿಸಿದ್ದರು. ಬಡವರ ಪಾಲಿನ ದೇವರಂತಿದ್ದ ರಾಮಚಂದ್ರ ಪೆಡ್ನೆಕರ ಅವರು ಅತ್ಯಂತ ಕಡಿಮೆ ಹಣವನ್ನು ಪಡೆದು ಮನೆಗಳ ಬ್ಲೂಪ್ರೀಂಟ್ ಮಾಡಿಕೊಡುತ್ತಿದ್ದರು.

       ಮೃತರು ಪತ್ನಿ ಛಾಯಾ, ಪುತ್ರಿ ಶಿಪಾಲಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಸ್ಥಳಕ್ಕೆ ಪಿಎಸೈ ಗೀತಾ ಶಿರಶಿಕರ, ಸಿಬ್ಬಂದಿಗಳಾದ ರಮೇಶ ತುಂಗಳ, ಅರುಣ ಮೇತ್ರಿ ಸ್ತಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.