ಅ0ಕೋಲಾ : ಹಿಂದೂ-ಮುಸ್ಲಿ0ಮರ ಭಾವನಾತ್ಮಕ ಸಂಬ0ಧವನ್ನು ಬೆಸೆಯುವ ವಿಶಿಷ್ಠ ಮೊಹರಂ ಆಚರಣೆಯು ವಿಶಿಷ್ಠವಾಗಿ ನಡೆಯಿತು.

ಬೊಬ್ರುವಾಡ ಕಬರಸ್ತಾನದಿಂದ ಮೊಹರಂ ಆಚರಣೆಯ ಒಂದು ತಾಜಿಯಾಗಳು ಹಾಗೂ ರೆಹಮಾನಿಯಾ ಮಸೀದಿಯಿಂದ ಒಂದು ತಾಜಿಯಾ ಮೆರವಣಿಗೆ ಹೊರಟು ಪಟ್ಟಣದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನ ಮತ್ತು ಪೂಜೆ ಮಾಡಲು ಅವಕಾಶ ಮಾಡಿಕೊಡಲಾಯಿತು.

ಹಿಂದೂ ಭಾಂಧವರು ಸಹ ದೇವರಿಗೆ (ಪಾತಿ) ಸಕ್ಕರೆ ಸಮರ್ಪಿಸಿ ಧನ್ಯತೆ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು

ತಾಜಿಯಾ ಮೆರವಣಿಗೆಯಲ್ಲಿ ಸೈಯದ್ ಸಂಶುದ್ದೀನ್, ಕಾಸೀಂ, ಶರ್ಪುದ್ದೀನ್ ಶೇಖ್, ಅಖ್ತರ ಸೈಯದ್, ಫೈರೋಜ ಸತ್ತಾರ ಖಾನ್, ಬಾಬಾಜಾನ್, ಪಪ್ಪು ಸೈಯದ್, ರಫೀಕ್ ಜಾಫರ್ ಸೈಯದ್ ಹಾಗೂ ಅಂಕೋಲಾ ನಗರದ ಮುಸ್ಲಿಂ ಯುವಕರು ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದರು. ಪೊಲೀಸ್ ಇಲಾಖೆಯವರು ಹಾಗೂ ಎಲ್ಲಾ ಮತದ ಸಾರ್ವಜನಿಕರು ಉತ್ತಮ ಸಹಕಾರ ನೀಡಿದರು. ಸಂಘಟನೆಯವರು ಧನ್ಯವಾದವನ್ನು ಅರ್ಪಿಸಿದರು.