ಹೆದ್ಧಾರಿ ಬದಿಯ ಮನೆಗಳಲ್ಲಿ ನಿಲ್ಲಿಸಿಟ್ಟ ಬೈಕ್ ಕಳ್ಳತನಕ್ಕೆ ವಿಫಲ ಯತ್ನ : ಒಂದು ಬೈಕ್ ಕಳ್ಳತನ

ವರದಿ : ಅರುಣ ಶೆಟ್ಟಿ.

ಅಂಕೋಲಾ : ಮನೆಯ ಎದುರು ನಿಲ್ಲಿಸಿಟ್ಟ ಬೈಕ್ ಕದ್ದು, ಇನ್ನೂ ಮರ‍್ನಾಲ್ಕು ಕಡೆ ಕಳುವು ಮಾಡಲು ವಿಫಲಯತ್ನ ನಡೆಸಿದ ಘಟನೆ ತಾಲೂಕಿನ ರಾ.ಹೆ 66 ಪಕ್ಕದ ವಂದಿಗೆ, ಬೊಳೆ ಶೆಟಗೇರಿ ಗ್ರಾಮಗಳಲ್ಲಿ ನಡೆದಿದೆ.

ಶನಿವಾರ ತಡರಾತ್ರಿ 1 ಗಂಟೆಯ ಹೊತ್ತಿಗೆ ವಂದಿಗೆ ಗ್ರಾಮದ ರಾಜೇಶ ಶೆಟ್ಟಿ ಮನೆಯ ಹೊರಗೆ ನಿಲ್ಲಿಸಿಟ್ಟಿರುವ ಹಿರೊಹೊಂಡಾ ಕಂಪನಿಗೆ ಸೇರಿದ ಬೈಕನ್ನು ಕದ್ದೊಯ್ದಿದ್ದಾರೆ. ಕಳ್ಳತನದ ಘಟನೆ ಅವರ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ.

ಇದಲ್ಲದೆ ಇನ್ನೂ ಅನೇಕ ಕಡೆ ಬೈಕ್ ಕಳ್ಳತನಕ್ಕೆ ಪ್ರಯತ್ನ ನಡೆದಿದೆ. ಕೆಲವೆಡೆ ಮನೆಯವರು ಎಚ್ಚರವಾದ ಕಾರಣ ಕಳ್ಳರು ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.

Aದಿಗೆಯ ಪುರಸಭೆಯ ಸದಸ್ಯೆ ಹೇಮಾ ಆಗೇರ ಅವರ ಪತಿ ಗಣಪತಿ ಆಗೇರ ಅವರ ತಮ್ಮ ಮನೆಯ ಮುಂದೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿಟ್ಟ, ಬೈಕ್‌ನ್ನು ಕಳ್ಳರು ಎಳೆದಾಡಿದ್ದಾರೆ. ಎಳೆದಾಡುವ ಸಂದರ್ಭದಲ್ಲಿ ಬೈಕ್ ಅಳವಡಿಸಿದ ಕ್ಲಚ್ ಕೇಬಲ ತುಂಡಾಗಿದೆ. ಅದನ್ನು ಅಲ್ಲಿಯೆ ಬಿಟ್ಟು ಭೈಕ್‌ನಲ್ಲಿದ್ದ ರೆನಕೋಟ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಮನೆಯವರು ಬೆಳಿಗ್ಗೆ ಅದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೀಗೆ ಹೆದ್ದಾರಿ ಪಕ್ಕದ ಅನೇಕ ಕಡೆಗಳಲ್ಲಿ ಮನೆ ಎದುರು ನಿಲ್ಲಿಸಿಟ್ಟ ಬೈಕ್ ಕಳ್ಳತನ ಮಾಡಲು ಪ್ರಯತ್ನ ಪಟ್ಟಿದ್ದಾದರೂ, ಅಲ್ಲಿ ವಿಫಲರಾಗಿ ಮರಳಿದ್ದಾರೆ. ಶೆಟಗೇರಿ ಗ್ರಾಮದಲ್ಲಿಯು ಕಳ್ಳತನಕ್ಕೆ ಆಗಮಿಸಿ ಗೇಟಗೆ ಹಾಕಿದ ಲಾಕ್ ಮುರಿಯಲು ಯತ್ನಿಸುವಾಗ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ರಾತ್ರಿಯೇ ಪೊಲೀಸರು ಶೆಟಗೇರಿ ಗ್ರಾಮಕ್ಕೆ ತೆರಳಿ ಕಳ್ಳತನ ಪ್ರಕರಣದ ವಿಚಾರಣೆ ನಡೆಸಿದ್ದಾರೆ.

ವಂದಿಗೆಯ ಬೈಕ್ ಕಳ್ಳತನ ಕುರಿತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಂಡಿದ್ದಾರೆ.

ಆದಷ್ಟು ಬೇಗ ಪೊಲೀಸರು ಪ್ರಕರಣವನ್ನು ಬೇಧಿಸಿ ನಾಗರಿಕರ ನೆಮ್ಮದಿಗೆ ಕಾರಣರಾಗಬೇಕು ಎಂದು ನ್ಯಾಯವಾದಿ ಉಮೇಶ ನಾಯ್ಕ ಆಗ್ರಹಿಸಿದ್ದಾರೆ.