ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೃದಯಾಘಾತಕ್ಕೊಳಗಾದ ಆರೋಪದ ವ್ಯಕ್ತಿಯ ಸಾವಿನ ಪ್ರಕರಣ :
ಆಸ್ಪತ್ರೆಗಾಗಮಿಸಿ ಸಿಸಿಟಿವಿ ಪುಟೇಜ್ ಪರಿಶೀಲಿಸಿದ ಡಿಎಚ್‌ಓ ನೀರಜ್ ಬಿ.ವಿ.
ವರದಿ : ರಾಘು ಕಾಕರಮಠ.
ಅಂಕೋಲಾ : ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಸಕಾಲದಲ್ಲಿ ಇಲ್ಲಿನ ಸರಕಾರಿ ಚಿಕಿತ್ಸೆ ದೊರಯದ ಪರಿಣಾಮ ಸಾವನ್ನಪ್ಪಿರುವ ಆರೋಪದ ಘಟನೆಯನ್ನು ತನಿಖೆ ನಡೆಸಲು, ಸ್ವತ: ಉಕ ಜಿಲ್ಲಾ ಆರೋಗ್ಯಾಧಿಕಾರಿ ನೀರಜ್ ಬಿ.ವಿ. ಅವರು ಭಾನುವಾರ ಆಸ್ಪತ್ರೆಗೆ ಆಗಮಿಸಿ ಸಿಸಿಟಿವಿ ಪುಟೇಜ್‌ಗಳನ್ನು ಪರಿಶೀಲಿಸಿದರು.
ಈ ವೇಳೆ ಆಸ್ಪತ್ರೆಯ ಮುಂದಿನ ಬಾಗಿಲು ಚಾವಿ ಹಾಕಿಕೊಂಡಿರುವದು ಗಮನಿಸಿದ ಡಿಎಚ್‌ಓ ಅವರು ಆಸ್ಪತ್ರೆಯ ಬಾಗಿಲನ್ನು ಮುಕ್ತವಾಗಿಡಿ, ಆಸ್ಪತ್ರೆಯ ಬಾಗಿಲು ಹಾಕಿ ಇಡೋಕೆ ಇಲ್ಲಿ ಕಳ್ಳತನ ನಡೆಯುವ ಪ್ರಶ್ನೆಯೆ ಇಲ್ಲ. ಇನ್ನು ಮುಂದೆ ಬಾಗಿಲು ಮುಕ್ತವಾಗಿಡಿ ಆಸ್ಪತ್ರೆಯ ಮುಂದಿನ ಗೆಟ್‌ಗಳನ್ನು ಭದ್ರಪಡಿಸಿಕೊಳ್ಳಿ ಎಂದರು.
ಬಡ ಜನರೆ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರೊಂದಿಗೆ ಸೌಜನ್ಯದಿಂದ ವರ್ತಿಸಿ, ಪ್ರೀತಿಯ ಮೂಲಕ ಅವರನ್ನ ಸ್ವಾಗತಿಸಿಕೊಳ್ಳಿ. ನಿಮ್ಮ ಪ್ರೀತಿಯ ಸ್ವಾಗತವೆ ರೋಗಿಯ ಅರ್ಧ ರೋಗ ವಾಸಿಯಾಗುತ್ತದೆ. ಸೇವೆಯ ವಿಚಾರದಲ್ಲಿ ಯಾವುದೇ ದರ್ಪ ಬೇಡಾ. ನಾನು ಕಳೆದ 32 ವರ್ಷದಿಂದ ಸೇವೆಯಲ್ಲಿದ್ದೇನೆ. ಬಡ ಜನರ ಕಣ್ಣೀರು ಒರೆಸುವ ಕೆಲಸ ನಮ್ಮಿಂದ ಆಗಬೇಕು ಹೊರತು ಅಧಿಕಾರದ ದರ್ಪ ನಮ್ಮಲ್ಲಿ ಬೇಡಾ ಎಂದರು.

ರೋಗಿಯನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು, ಪ್ರೀತಿಯಿಂದ ಮನೆಯವರಂತೆ ಚಿಕಿತ್ಸೆ ನೀಡಿದಾಗ ಯಾವುದೇ ಗೊಂದಲಕ್ಕೆ ಆಸ್ಪದವಾಗುವದಿಲ್ಲ. ಆಸ್ಪತ್ರೆಯಲ್ಲಿ ಕುಂದುಕೊರತೆಗಳಿದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಯೊಂದಿಗೆ ನಗು ಮುಖದಿಂದ ಆಸ್ಪತ್ರೆಯ ಹೊರಕ್ಕೆ ಬೀಳ್ಕೊಡುವ ಗುರುತರ ಜವಬ್ದಾರಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈಧ್ಯರ ಮೇಲಿದೆ. ಆಸ್ಪತ್ರೆ ಎಂದ ಮೇಲೆ ಸಣ್ಣ ಪುಟ್ಟ ನ್ಯೂನ್ಯತೆಗಳು ಇರುವದು ಸಹಜ. ಆದರೆ ಈ ಸಣ್ಣ ಪುಟ್ಟ ನ್ಯೂನ್ಯತೆಗಳನ್ನೆ ಸರಿಪಡಿಸಿಕೊಂಡರೆ ರೋಗಿಗೆ ಯಾವುದೇ ತೊಂದರೆಯಾಗುವದಿಲ್ಲ ಎಂದು ಕಿವಿಮಾತು ಹೇಳಿದರು.
ಆಸ್ಪತ್ರೆಯನ್ನು ಪರಿಶೀಲಿಸಿದ ಡಿಎಚ್‌ಓ ಅವರು ಸ್ವಚ್ಚತೆಯ ಬಗ್ಗೆ ಶ್ಲಾಘಿಸಿದರು. ಇನ್ನು ಇಲ್ಲಿನ ವೈಧ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರು ಡಿಎಚ್‌ಓ ಅವರ ಗಮನಕ್ಕೆ ತಂದರು. ಇಲ್ಲಿ ಪ್ರಸೂತಿ ವೈಧ್ಯರನ್ನು ನೇಮಿಸುವಂತೆ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕೃಯಿಸಿದ ಅವರು ಪ್ರಸೂತಿ ವೈಧ್ಯರ ನೇಮಕಕ್ಕೆ ಅರ್ಜಿಯನ್ನು ಕೂಡ ಆಹ್ವಾನಿಸಲಾಗಿದೆ ಆದರೆ ಯಾರು ಕೂಡ ಸೇವೆಗೆ ಬರುಲು ಒಪ್ಪುತ್ತಿಲ್ಲ. ಇನ್ನು ಮುಂದೆ ಆಸ್ಪತ್ರೆಯಲ್ಲಿರುವ ಇತರೆ ವೈದ್ಯರಿಗೆ ಹೆರಿಗೆ ಮಾಡಿಸುವಂತೆ ಸೂಚಿಸಿದ್ದೇನೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಕಾರವಾರದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವAತೆ ಮಾರ್ಗದರ್ಶನ ನೀಡಿದ್ದೇನೆ ಎಂದರು.
ಡಿಎಚ್‌ಓ ಅವರು ಆಸ್ಪತ್ರೆಯ ಡೆಂಟಲ ವಿಭಾಗ, ಲ್ಯಾಭ್, ಐಸಿಯು, ಲೆಬರ್ ರೂಂ, ಅಪೌಷ್ಠಿಕ ಮಕ್ಕಳ ಘಟಕ, ಶವಾಗಾರ, ಐಸಿಟಿಸಿ ಸೇರಿದಂತೆ ಎಲ್ಲಾ ವೈದರು ಹೊರ ರೋಗಿಯ ವಿಭಾಗ, ಆಯುಷ ಘಟಕವನ್ನು ಪರಿಶೀಲಿಸಿದರು
ಈ ವೇಳೆ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ. ಸಂತೋಷಕುಮಾರ, ಡಾ. ಈಶ್ವರಪ್ಪ, ಡಾ. ರಾಜೇಶ ನಾಯ್ಕ, ಡಾ. ಅನುಪಮಾ, ಡಾ. ಗಿರೀಶ ಭೂತೆ, ಡಾ. ನಿಕಿತಾ ಪೂಜಾರಿ, ಡಾ. ಸೌಮ್ಯ ಟಿ.ಎಸ್, ಎಫ್‌ಡಿಸಿ ಪ್ರಶಾಂತ ಗಾಂವಕರ, ಹಿರಿಯ ಶೂಶ್ರಷಾಧಿಕಾರಿ ದೇವಕಿ ನಾಯ್ಕ., ಶೂಶ್ರಷಾಧಿಕಾರಿ ಗಿರಿಜಾ ಗೌಡ, ಉಷಾ ಗೌಡ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಾಕ್ಸ್ ನ್ಯೂಸ್ ;
ತನ್ನದೇ ಆದ ಸಂಸ್ಕçತಿ ಪರಂಪರೆಯ ಮೂಲಕ, ಹೆಸರು ಗಳಿಸಿದ ಉಕ ಜಿಲ್ಲೆಯಲ್ಲಿ ಸೇವೆ ಮಾಡಲು ನನಗೆ ಅವಕಾಶ ದೊರಿತಿದ್ದೆ ನನ್ನ ಭಾಗ್ಯ ಎಂದು ಭಾವಿಸಿದ್ದೇನೆ. ಇಲ್ಲಿನ ಬಡ ರೋಗಿಗಳಿಗೆ ಉತ್ತಮ ಸೇವೆ ನೀಡಲು ಕೂಡ ಕಂಕಣಬದ್ಧನಾಗಿದ್ದೇನೆ. ರೋಗಿಗಳಿಗೆ ಯಾವುದೇ ತೊಂದರೆಯಾಗದAತೆ ಸೇವೆ ನೀಡಲು ನಿರ್ದೇಶನ ನೀಡಿದ್ದೇನೆ. ಹಾಗೆ ರೋಗಿಗಳೊಂದಿಗೆ ಸೌಜನ್ಯವಾಗಿ ವರ್ತಿಸಿ, ಪ್ರೀತಿ ಸಂಪಾದಿಸುವAತೆ ವಿಶೇಷ ಸಭೆ ನಡೆಸಿ ತಿಳುವಳಿಕೆ ನೀಡಲಾಗಿದೆ.
ನೀರಜ್ ಬಿ.ವಿ.
ಜಿಲ್ಲಾ ಆರೋಗ್ಯಾಧಿಕಾರಿ ಉಕ.
ನಡೆದದ್ದೇನು..?
ಶುಕ್ರವಾರ ತಡರಾತ್ರಿಯಂದು ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದ ವ್ಯಕ್ತಿಯೊರ್ವರನ್ನ, ಆಸ್ಪತ್ರೆಯ ಬಾಗಿಲಲ್ಲೆ ನಿಲ್ಲಿಸಿದ ಪರಿಣಾಮ, ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅಸುನೀಗಿದ್ದಾರೆ ಎಂದು ಮೃತನ ಸಂಬAದಿಕರು ಆರೋಪಿಸಿದ್ದರು.
ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಸಮೀಪದ ನಿವಾಸಿ ವೆಂಕಟೇಶ ರಾಮಾ ನಾಯ್ಕ ಅವರಿಗೆ ಶುಕ್ರವಾರ ಒಮ್ಮೆಲೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೆ ಚಿಕಿತ್ಸೆಗಾಗಿ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ 12-10 ರ ಸುಮಾರಿಗೆ ಕರೆ ತರಲಾಗಿತ್ತು.

