ಅಂಕೋಲಾ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆಯನ್ನು ಇಲ್ಲಿನ ಕಾಂಗ್ರೆಸ್ ಪ್ರಮುಖರು ಪಟಾಕಿ ಸಿಡಿಸಿ, ಸಿಹಿ ವಿತರಿಸುವ ಮೂಲಕ ಇಲ್ಲಿನ ಸತೀಶ ನಾಯ್ಕ ಹೂವಿನ ವೃತ್ತದಲ್ಲಿ ಆಚರಿಸಿದರು.
ಜಿಪಂ ಮಾಜಿ ಸದಸ್ಯ ವಿನೋದ ನಾಯಕ ಬಾಸ್ಗೋಡ ಮಾತನಾಡಿ, ಬಡವರ ಪಾಲಿ ಆಪತ್ಭಾಂಧವನಾಗಿ ನಿಂತಿರುವ ಸಿದ್ದರಾಮಯ್ಯ ಅವರು ದೇವತಾ ಮಾನವನಾಗಿ ನಿಂತಿದ್ದಾರೆ ಎಂದರು.
ಕಾಂಗ್ರೆಸ್ ಪ್ರಮುಖ ಸುರೇಶ ನಾಯ್ಕ. ಅಲಗೇರಿ ಮಾತನಾಡಿ, ಇಂದು ರಾಜ್ಯದಲ್ಲಿ ಭಾಗ್ಯದ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಡವರ ಪಾಲಿನ ಭವಿಷ್ಯವಾಗಿ ಹೊರ ಹೊಮ್ಮಿದ್ದಾರೆ. ಬಹುಷ ಇಂಥ ವಿನೂತನ ಪ್ರಯೋಗದ ಮುಖ್ಯಮಂತ್ರಿ ದೇಶದಲ್ಲಿ ಮಾದರಿಯಾಗಿದ್ದಾರೆ ಎಂದರು.
ಕಾಂಗ್ರೆಸ್ ಪ್ರಮುಖರಾದ ಉದಯ ವಾಮನ ನಾಯಕ, ನೆಹರು ಮಂಚನ ಜಿಲ್ಲಾಧ್ಯಕ್ಷ ಪುರುಷೋತ್ತಮ ನಾಯ್ಕ, ಗೋಪು ನಾಯಕ. ಅಡ್ಲೂರು, ಮಂಜುನಾಥ ನಾಯ್ಕ. ಬೇಳಾ, ಉಪೇಂದ್ರ ನಾಯ್ಕ, ಜಗಧೀಶ ನಾಯ್ಕ, ಸುರೇಶ್ ಎಸ್ ನಾಯ್ಕ ಆಸ್ಲಗದ್ದೆ, ಮಂಜುನಾಥ ನಾಯ್ಕ, ಸತೀಶ ನಾಯ್ಕ, ಪಾಂಡುರAಗ ಗೌಡ, ರಾಜು ಹರಿಕಂತ್ರ, ರಂಜನ ನಾಯಕ. ಹಿಚ್ಕಡ, ಗಜು ನಾಯ್ಕ. ಬೇಳಾ, ಮನೋಹರ ನಾಯ್ಕ, ವಸಂತ ನಾಯಕ, ಆನಂದು ನಾಯ್ಕ, ರತ್ನಾ ನಾಯ್ಕ, ರಾಜು ಹರಿಕಾಂತ, ಪ್ರಕಾಶ ಪಳ್ಳಿಕೇರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
