ಹೊನ್ನಾವರ : ತಾಲೂಕಿನ ಕುದ್ರಗಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ಕ್ರೀಯಾಶೀಲ ವ್ಯಕ್ತಿತ್ವದ ಮಹಮ್ಮದ ಫೈಸಲ ಬಾವಪಕ್ಕಿ ಹಾಗೂ ಉಪಾಧ್ಯಕ್ಷರಾಗಿ ಫಿಲೋನಿಮಾ ಲಾಜರ್ ಮಿರಾಂಡಾ ಅವರು ಆಯ್ಕೆಯಾಗಿದ್ದಾರೆ.

 ನೂತನ ಅಧ್ಯಕ್ಷ ಮಹಮ್ಮದ ಫೈಸಲ ಬಾವಪಕ್ಕಿ ಮಾತನಾಡಿ, ಎಲ್ಲ ಜಾತಿ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಸೌಹಾರ್ದತೆಯಿಂದ ಗ್ರಾಮ ಪಂಚಾಯತನ್ನು ಮುನ್ನೆಡಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ವಾರದಲ್ಲಿ 3-4 ದಿನ ಗ್ರಾಮ ಪಂಚಾಯತದಲ್ಲಿ ನಾನು ಜನರ ಸೇವೆಗೆ ಕಚೇರಿಯಲ್ಲಿದ್ದು, ಬಂದ ಅನುದಾನವನ್ನು ಎಲ್ಲ ಸದಸ್ಯರ ಹಾಗೂ ನಾಗರಿಕರ ಸಲಹೆ ಸೂಚನೆ ಪಡೆದು ಸದ್ಬಳಕೆ ಮಾಡಿಕೊಂಡು ಮಾದರಿ ಗ್ರಾಮ ಪಂಚಾಯತನ್ನಾಗಿ ಮಾಡಲು ಕನಸನ್ನು ಇಟ್ಟುಕೊಂಡಿದ್ದಾನೆ ಎಂದರು.

 ಈ ಸಂದರ್ಭದಲ್ಲಿ ಪಂಚಾಯತದ ಸದಸ್ಯರು, ಪಿಡಿಓ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.