ವರದಿ : ರಾಘು ಕಾಕರಮಠ.
ಅಂಕೋಲಾ : ತಾನು ಮಂಗಳಮುಖಿ ಎಂದು ಜನರಿಗೆ ನಂಬಿಸುತ್ತಾ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಟ್ಟು ಅಲಿಯಾಸ್ ಕವಿತಾ ಎನ್ನುವ ಪುರಷನೊಬ್ಬ ಮಂಗಳಮುಖಿಯ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣವನ್ನು ವಸೂಲಿ ಮಾಡುತ್ತಿದ್ದ. ಹೀಗೆ ಹಣ ವಸೂಲಿ ಮಾಡುತ್ತಿರುವ ವಿಷಯವನ್ಬು ಅಸಲಿ ಮಂಗಳಮುಖಿಯರ ಅಂತರ0ಗ ಸಂಘಟನೆಯ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.
ಕೂಡಲೆ ಅಂಕೋಲಾಕ್ಕೆ ಆಗಮಿಸಿದ ಮಂಗಳಮುಖಿಯರಾದ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ. ಈ ವೇಳೆ ಲುಂಗಿಯ ಮೇಲೆ ಸೀರೆ ಉಟ್ಟಿರುವದನ್ನು ಗಮನಿಸಿದ ಅಸಲಿ ಮುಂಗಳಮುಖಿಯರು ಆತನ ಸೀರೆ ಬಿಚ್ಚಿಸಿ, ಲುಂಗಿಯ ಮೇಲೆ ನಿಲ್ಲಿಸಿ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

ಜೊತೆಗಿದ್ದ ಇನೊರ್ವನು ಸಹ ಅಸಲಿ ಮಂಗಳಮುಖಿಯಾಗಿರಲಿಲ್ಲ. ಆದರೆ ಆದರೆ ಸ್ವಲ್ಪ ವೃದ್ಧನಂತೆ ಕಂಡು ಬಂದಿದ್ದರಿAದ ಆತನಿಗೆ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ ಬಿಟ್ಟಿದ್ದೇವೆ ಎಂದು ಸುಹಾನಾ ತಿಳಿಸಿದರು.
ಪುರುಷನಾಗಿ ದುಡಿದು ತಿನ್ನುವ ಬದಲು ಮಂಗಳಮುಖಿಯಾಗಿ ನಾಟಕವಾಡುತ್ತಿದ್ದಾನೆ. ಇಂತವರಿAದ ಅಸಲಿ ಮಂಗಳಮುಖಿಯರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಆಗ್ರಹಿದ್ದಾರೆ.
ಸೀರೆ ಉಟ್ಟುಕೊಂಡು, ಮಂಗಳಮುಖಿಯ ವೇಷ ಹಾಕಿಕೊಂಡು ಬೀಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಅಸಲಿ ಮುಖವನ್ನು ಬಯಲು ಮಾಡಿದ್ದೇವೆ. ಈ ರೀತಿ ಘಟನೆಗಳು ಉಕ ಜಿಲ್ಲೆಯಲ್ಲಿ ಅನೇಕ ಕಡೆ ಕಂಡು ಬರುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ವಿಶೇಷವಾಗಿ ಗಮನ ಹರಿಸಿ ಕಾರ್ಯಪ್ರವೃತ್ತರಾಗಬೇಕು ಎನ್ನುವದು ನಮ್ಮ ಆಶಯವಾಗಿದೆ.
ಆಯಿಷಾ ಹೊನ್ನಾವರ.
ಉಪಾಧ್ಯಕ್ಷೆ ಅಂತರ0ಗ ಸಂಘಟನೆ.