ಅಂಕೋಲಾ : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಜೈಹಿಂದ ಮೈದಾನದಲ್ಲಿ ಆಯೋಜಿಸಿದ್ದಸ್ವಾತಂತ್ರ್ಯೋತ್ಸವ ಕಫ್ – 2023 ಪಂದ್ಯಾವಳಿಗೆ ತಹಸೀಲ್ದಾರ ಅಶೋಕ ಭಟ್ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.

ತಹಸೀಲ್ದಾರ ಅಶೋಕ ಭಟ್ ಮಾತನಾಡಿ ರಾಷ್ಟ್ರೀಯ ಉತ್ಸವವನ್ನು ಇ‌ನ್ನಷ್ಟು ವೈಭವೀಕರಿಸಲು ಹಾಗೂ ಇಲಾಖೆಗಳ ನಡುವೆ ಸೌಹಾರ್ದಯುತ ವಾತಾವರಣವನ್ನು ಕಲ್ಲಿಸಲು ಕೆ.ಎ.ಎಸ್.ಅಧಿಕಾರಿ ಡಾ. ಉದಯಕುಮಾರ ಶೆಟ್ಟಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಜಯರಾಜ್ ಎಚ್ ಅವರ ಸಾಮಾಜಿಕ ಕಳಕಳಿಯ ಈ ಪಂದ್ಯಾವಳಿ‌ ಮಾದರಿಯಾಗಿದೆ ಎಂದರು.

ಕ್ರೀಡಾಂಗಣವನ್ನು ಉದ್ಘಾಟಿಸಿದ ಅಂಕೋಲಾ ಠಾಣೆಯ ಪಿಎಸೈ ಉದ್ದಪ್ಪ ಧರಪ್ಪನವರ ಮಾತನಾಡಿ ವರ್ಷದ 12 ತಿಂಗಳು ಒತ್ತಡದ ಕರ್ತವ್ಯದಲ್ಲಿ ಇರುವ ಇಲಾಖೆಗಳು, ಇತಂಹ ಪಂದ್ಯಾವಳಿಯ ಮೂಲಕ ಹೊಸ ಚೈತನ್ಯವನ್ನ ಹುಟ್ಟು ಹಾಕುವಲ್ಲಿ ಕಾರಣವಾಗುತ್ತದೆ ಎಂದರು.

ನ್ಯಾಯವಾದಿ ಉಮೇಶ ನಾಯ್ಕ, ಕರಾವಳಿ ಕಾವಲು ಪಡೆಯ ಪಿಎಸೈ ಪ್ರೀಯಾಂಕಾ ನ್ಯಾಮೆಗೌಡ, ಸಾರಿಗೆಯ ಇಲಾಖೆಯ ಸಹಾಯಕ ಅಧೀಕ್ಷಕ ಹರೀಶ ಖಾರ್ವಿ, ಜಲಮಂಡಳಿಯ ಅಧಿಕಾರಿ ಇಕ್ಬಾಲ ಖಾನ್ ಮಾತನಾಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಡಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯದರ್ಶಿ ವಿದ್ಯಾಧರ ಮೊರಬಾ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ದಿನಕರ ನಾಯ್ಕ ನಿರೂಪಿಸಿದರು. ಪತ್ರಕರ್ತ ಮಾರುತಿ ಹರಿಕಂತ್ರ ವಂದಿಸಿದರು.