ಅಂಕೋಲಾ: ತಾಲೂಕಿನ ಹಟ್ಟಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋ ಪ್ರೇಮಿಗಳ ಕುಟುಂಬದ ವತಿಯಿಂದ ಶನಿವಾರದಂದು ಹಟ್ಟಿಕೇರಿ-ಅವರ್ಸಾ-ಹಾರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಶಾಲಾ ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಭಾರತದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದುಸ್ಪರ್ಧೆಯಲ್ಲಿ 16 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಟ್ಟಿಕೇರಿ ಸ.ಹಿ.ಪ್ರಾ. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಗುರು ಡಿ ನಾಯ್ಕ ಗೋ ಪ್ರೇಮಿ ಕುಟುಂಬದ ಸದಸ್ಯರು ಮೂಕ ಪ್ರಾಣಿಯ ನೋವಿಗೆ ಸ್ಪಂದಿಸುವ ಮನಸುಳ್ಳವರಾಗಿದ್ದು ಇವರ ಕಾರ್ಯ ಶ್ಲಾಘನೀಯ ಎಂದರು. ಭಾಷಣ ಸ್ಪರ್ಧೆಯಲ್ಲಿ ಹಟ್ಟಿಕೇರಿ ಶಾಲೆಯ ವಿದ್ಯಾರ್ಥಿ ಪ್ರತೀಕ್ಷಾ ಪಿ ನಾಯ್ಕ ಪ್ರಥಮ ಸ್ಥಾನ ಪಡೆದು ಕೊಂಡರೆ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿ ಪ್ರಜ್ವಲ ವಿ ನಾಯ್ಕ ದ್ವಿತೀಯ ಸ್ಥಾನ ಹಾಗೂ ಹಟ್ಟಿಕೇರಿ ಶಾಲೆ ವಿದ್ಯಾರ್ಥಿ ಭಾವನಾ ಬಿ ನಾಯ್ಕ ತೃತೀಯ ಸ್ಥಾನ ಪಡೆದುಕೊಂಡರು.

ಶಿಕ್ಷಕರಾದ ರಮೇಶ ಕಳ್ಳಿಮನಿ, ಸಂಜೀವ ನಾಯಕ, ರೇಷ್ಮಾ ನಾಯ್ಕ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ನಿರ್ಣಾಯಕ ರಮೇಶ ಕಳ್ಳಿಮನಿ ಮಾತನಾಡಿ ಇಂತಹ ಯುವಕರಿಂದ ಗೋವುಗಳ ರಕ್ಷಣೆಯೊಂದಿಗೆ ಉತ್ತಮ ಕಾರ್ಯಕ್ರಮಗಳು ನಡೆಯಲಿ, ಹಾಗೂ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯ ಕುರಿತು ವಿಷಯ ತಿಳಿಸಿದರು.

ಈ ಸಂದರ್ಭದಲ್ಲಿ ಪಶು ವೈದ್ಯರಾದ ಮೋಹದಾಸ ಜಿ ನಾಯ್ಕ ಹಾಗೂ ಸಹಾಯಕ ಶ್ಯಾಮ್ ಸ್ವಾಮಿ ರೋಹಿದಾಸ್ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ರೇಷ್ಮಾ ನಾಯ್ಕ ಇವರು ಮಾತನಾಡಿ ಇಂತಹ ಯುವ ಪಡೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಕಾರ್ಯಕ್ರಮ ನಡೆಯಬೇಕು, ಗೋ ಪ್ರೇಮಿ ಕುಟುಂಬದ ಕಾರ್ಯವು ಗೋವುಗಳ ಮೇಲಿರುವ ಪ್ರೀತಿಯು ಬಣ್ಣಿಸಲು ಸಾಲದು ಇಂತಹ ಸಾಮಾಜಿಕ ಕಳಕಳಿಯ ತಂಡಕ್ಕೆ ಜಯವಾಗಲಿ ಎಂದು ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ವಿದ್ಯಾರ್ಥಿಗಳಿಗೂ ಸಹ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಟ್ಟಿಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಾನಸ ನಾಯ್ಕ, ಮಾಜಿ ಸದಸ್ಯ ನಿತ್ಯಾನಂದ ಆರ್ ನಾಯ್ಕ ಉಪಸ್ಥಿದರಿದ್ದರು.

ಪ್ರತಿ ಶಾಲೆಯ ಶಿಕ್ಷಕರು ಹಾಗೂ ಪಾಲಕರು. ಎಸ್ ಡಿ ಎಮ್ ಸಿ ಸದಸ್ಯರು. ಗೋ ಪ್ರೇಮಿ ಕುಟುಂಬದ ಸದಸ್ಯರು. ಊರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.