ಅಂಕೋಲಾ : ಅಂಕೋಲೆಯ ಮಣ್ಣಿನ ಹೆಮ್ಮೆಯ ಮಗಳು, ಬೆಂಗಳೂರಿನ ಸಿಐಡಿ ಘಟಕದ ಡಿವೈಎಸ್ಪಿ ಅಂಜುಮಲಾ ತಿಮ್ಮಣ್ಣ ನಾಯಕ ಅವರಿಗೆರಾಷ್ಟ್ರಪತಿ ಪದಕಕ್ಕೆ( President Medal ) ಭಾಜನರಾಗಿದ್ದಾರೆ.
ಅಂಜುಮಾಲಾ ಮೂಲತಃ ಅಂಕೋಲಾ ತಾಲೂಕಿನ ಶಿರಗುಂಜಿ ಗ್ರಾಮದ ತಿಮ್ಮಣ್ಣ ನಾಯಕ ಮತ್ತು ಶಾಂತಿ ನಾಯಕ ದಂಪತಿಗಳ ಸುಪತ್ರಿಯಾಗಿದ್ದಾರೆ.ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಡೈನಾಮಿಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಜುಮಾಲಾ ನಾಯಕ ಅವರು ಬೆಂಗಳೂರಿನ ಬಚಪನ ಸ್ಲೂಲನ ಮಾಲಕ ಮಂಜುನಾಥ ನಾಯಕ, ದಂತ ವೈದ್ಯರಾದ ಡಾ. ಸಂಜು ಟಿ.ನಾಯಕ ಹಾಗೂ ಡಾ. ಸಮೀರ ಟಿ. ನಾಯಕ ಅವರ ಸಹೋದರಿಯಾಗಿದ್ದಾಳೆ.
ಅಂಜುಮಲಾ ನಾಯಕ ಅವರ ಕ್ರೀಯಾಶೀಲ ಕರ್ತವ್ಯದ ಹಿಂದೆ ಪತಿ ಮಹೇಶ ಜಟಕನಮನೆ ದೇವರಬಾವಿ ಅವರ ಪ್ರೋತ್ಸಾಹ ಹಾಗೂ ಮಗಳು ಸ್ತುತಿ ಮತ್ತು ಮಗ ಗ್ರಹಿತ್ ಅವರು ಚೈತನ್ಯಕ್ಕೆ ಕಾರಣರಾಗಿದ್ದಾರೆ.ಡಿವೈಎಸ್ಪಿ ಅಂಜುಮಾಲಾ ನಾಯಕ ಅವರಿಗೆ ಈಗಾಗಲೇ ಮುಖ್ಯಂತ್ರಿಗಳ ಪದಕ ಮತ್ತು ಕೆಂಪೆಗೌಡ ಪ್ರಶಸ್ತಿಗಳು ಪ್ರಧಾನಗೊಂಡಿದೆ.


