ಅಂಕೋಲಾ : ತಾಲೂಕಿಗೆ ನೂತನವಾಗಿ ತಹಸೀಲ್ದಾರ ಆಗಮಿಸಿದ ಅಶೋಕ ಭಟ್ಟ ಅವರನ್ನು ಅಂಕೋಲಾ ತಾಲೂಕಾ ಸಂಘಟಿತ ಸಾಂಸ್ಕೃತಿಕ ಸಂಘದ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಿ ಸ್ವಾಗತಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ ಅಶೋಕ ಭಟ್ಟ ಮಾತನಾಡಿ ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ನನ್ನ ತಂದೆಯವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಸಮಯವನ್ನು ನೆನಪಿಸಿಕೊಂಡು ಚಿಕ್ಕಂದಿನ ನೆನಪನ್ನು ಮೆಲಕು ಹಾಕಿ ಅಂಕೋಲಾ ಹಾಗೂ ಅವರ ನಡುವಿನ ಬಾಂಧವ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಹವ್ಯಕ ಸಂಘದ ಅಧ್ಯಕ್ಷರ ಎಂ ಪಿ ಭಟ್ಟ, ಪ್ರಧಾನ ಕಾರ್ಯದರ್ಶಿ ವಿ‌ ಬಿ ಭಟ್ಟ ಹಾಗೂ ರಾಘವೇಂದ್ರ ಭಟ್ಟ, ನಿರ್ದೇಶಕರುಗಳು , ಅಂಕೋಲಾ ಹವ್ಯಕ ಬಂಧುಗಳು ಭಾಗವಹಿಸಿದ್ದರು.