ಅಂಕೋಲಾ : ಇಲ್ಲಿನ ಸರಕಾರಿ ಆಸ್ಪತ್ರೆಯ ಎದುರಿನ ಜೈ ಮಾತಾ ಆಟೋ ಸ್ಟಾಂಡ್‌ನವರು ಸರಕಾರಿ ಆಸ್ಪತ್ರೆಯ ಒಳ ಹಾಗೂ ಹೊರ ಬಡ ರೋಗಿಗಳಿಗೆ ಹಾಲು-ಹಣ್ಣು ವಿತರಿಸುವ 77 ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣ ಆಚರಿಸಿದರು.

ಜೈ ಮಾತಾ ಆಟೋ ಸ್ಟಾಂಡ್‌ನ ಅಧ್ಯಕ್ಷ ವಿನಾಯಕ ಎಸ್. ನಾಯ್ಕ ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಟಾಂಡ್‌ನ ಉಪಾಧ್ಯಕ್ಷ ರಾಮು ಅಂಕೋಲೆಕರ, ಕಾರ್ಯದರ್ಶಿ ನಾಗರಾಜ್ ನಾಯ್ಕ, ಖಜಾಂಚಿ ಕುಮಾರ ಎನ್. ನಾಯ್ಕ, ಸಹ ಕಾರ್ಯದರ್ಶಿ ಉದಯ ಗೌಡ, ಸದಸ್ಯರಾದ ನಾಗರಾಜ್ ಶೆಟ್ಟಿ, ಸುಬ್ರಮಣ್ಯ ನಾಯ್ಕ, ರಾಮಾ ನಾಯ್ಕ, ಉಮೇಶ ನಾಯ್ಕ ಸೇರಿದಂತೆ ಇನ್ನಿತರ ಎಲ್ಲಾ ಸದಸ್ಯರು ಹಾಜರಿದ್ದು ರಾಷ್ಟ್ರೀಯ ಉತ್ಸವಕ್ಕೆ ಮೆರಗನ್ನು ತಂದರು.

ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ ಖಾಕಿ ತೊಟ್ಟು, ಪ್ರಯಾಣಿಕರೊಂದಿಗೆ ಉತ್ತಮವಾಗಿ ವ್ಯವಹರಿಸಿ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಕೈ ಜೋಡಿಸಿರುವ ಅಂಕೋಲಾದ ರಿಕ್ಷಾ ಚಾಲಕರು ಮಾದರಿಯಾಗಿದ್ದಾರೆ. ಸಂಕಷ್ಠದಲ್ಲಿ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರಿಗೆ ಪೂರಕವಾದ ಸೌಲಭ್ಯಗಳನ್ನು ಸರಕಾರ ನೀಡುವದರ ಮೂಲಕ, ಆಟೋದರವ ನೆಮ್ಮದಿಗೆ ಕಾರಣರಾಗಬೇಕು ಎಂದರು.
ಆಟೋ ಚಾಲಕರು ಸಾರ್ವಜನಿಕರಿಗೂ ಸಹ ಸಿಹಿಯನ್ನು ವಿತರಿಸಿ ಪ್ರೀತಿ ಹಂಚಿಕೊಂಡರು.
