ಅಂಕೋಲಾ ; ಬಳಲೆ – ಮಾದನಗೇರಿ ನಾಮಧಾರಿ ಸಮಾಜದ ವತಿಯಿಂದ ಸಗಡಗೇರಿ ಗ್ರಾಮ ಪಂಚಾಯತಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರವಣಕುಮಾರ ಮುಕುಂದ ನಾಯ್ಕ ಅವರನ್ನು ಬಳಲೆಯ ಬಳಗಾದೇವಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಶ್ರವಣಕುಮಾರ ನಾಯ್ಕ ಮಾತನಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಗಡಗೇರಿ ಗ್ರಾಮ ಪಂಚಾಯತನ್ನು ಮಾದರಿ ಪಂಚಾಯತಯನ್ನಾಗಿ ರೂಪಿಸಿಲು ಕನಸನ್ನು ಹೊತ್ತಿದ್ದೇನೆ ಎಂದರು.
ಸಮಾಜದ ಪ್ರಮುಖರಾದ ಜಟ್ಟಿ ಗೋವಿಂದ ನಾಯ್ಕ, ಹಿರಿಯರಾದ ಮಾಣಿ ಗೋವಿಂದ ನಾಯ್ಕ, ನಾರಾಯಣ ಹನುಮಂತ ನಾಯ್ಕ. ಮಾದಗೇರಿ, ಮಾದೇವ ನಾಯ್ಕ. ಮಾದನಗೇರಿ, ಚಂದು ನಾಯ್ಕ. ಮೊಗಟಾ, ವೆಂಕಟ್ರಮಣ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ದೀಪಾ ಹಾಗೂ ಮಧುರಾ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ಸಂದೀಪ ನಾಯ್ಕ ಸ್ವಾಗತಿಸಿ ನಿರೂಪಿಸಿದರು.
