ಅಂಕೋಲಾ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಇಲ್ಲಿಯ ಜೈಹಿಂದ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಕ್ರಿಕೆಟ್ 2023 ರ ಪಂದ್ಯಾವಳಿಯಲ್ಲಿ ಕರಾವಳಿ ಕಾವಲು ಪಡೆ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಕಂದಾಯ ಇಲಾಖೆ ದ್ವೀತಿಯ ಸ್ಥಾನ ಪಡೆದುಕೊಂಡಿತು. ಕಂದಾಯ ಇಲಾಖೆಯ ಅಜಯ ಉತ್ತಮ ಬಾಟ್ಸಮನ್, ಕರಾವಳಿ ಕಾವಲು ಪಡೆಯ ಕುಮಾರ ಮ್ಯಾನ್ ಆಪ್ ದಿ ಸಿರೀಸ, ಮತ್ತು ಪಂದ್ಯ ಪುರುಷ, ಉತ್ತಮ ಬೌಲರ ಆಗಿ ಹರೀಶ ಪ್ರಶಸ್ತಿ ಪಡೆದುಕೊಂಡರು.

ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ತಹಸೀಲ್ದಾರ ಅಶೋಕ ಭಟ್ ಕಾರ್ಯದ ಒತ್ತಡದ ನಡುವ ಇರುವ ಸರಕಾರಿ ನೌಕರರಿಗೆ ಇಂತಹ ಪಂದ್ಯಾವಳಿಗಳು ಯುವ ಚೈತನ್ಯವನ್ನು ಮೂಡಿಸುತ್ತದೆ ಎಂದರು.
ಬಹುಮಾನ ವಿತರಕರಾಗಿ ಪಾಲ್ಗೊಂಡು ನ್ಯಾಯವಾದಿ ಸುಬಾಷ ನಾರ್ವೇಕರ ಮಾತನಾಡಿ ಕೆ.ಎ.ಎಸ್. ಅಧಿಕಾರಿ ಡಾ. ಬಿ ಉದಯಕುಮಾರ ಶೆಟ್ಟಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಜಯರಾಜ್ ಎಚ್ ಅವರ ಉದಾತ್ತ ಉದ್ದೇಶವನ್ನ ಕಾರ್ಯನಿರತ ಪತ್ರಕರ್ತರ ಸಂಘ ಸಾಕಾರಗೊಳಿಸುತ್ತ ಬಂದಿರುವದು ಮಾದರಿ ಎಂದರು.
ಈ ಸಂದರ್ಭದಲ್ಲಿ ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲೂರ, ಜಿಲ್ಲಾ ನೋಟರಿ ಸಂಘದ ಅಧ್ಯಕ್ಷ ನಾಗಾನಂದ ಬಂಟ, ನ್ಯಾಯವಾದಿ ಸುಭಾಷ್ ನಾರ್ವೇಕರ, ಪಂದ್ಯಾವಳಿಯಲ್ಲಿ ನಿರ್ವಹಣೆ ಮಾಡಿದ ಮಂಜುನಾಥ ನಾಯ್ಕರನ್ನು ಸನ್ಮಾನಿಸಲಾಯಿತು.
ಕರಾವಳಿ ಕಾವಲು ಪಡೆಯ ಪಿಎಸೈ ಪ್ರಿಯಾಂಕಾ ನ್ಯಾಮಗೌಡ, ತಾಪಂ ಎಡಿ ಸುನೀಲ ಎಂ. ವೇದಿಕೆಯಲ್ಲಿದ್ದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಸ್ವಾಗತಿಸಿದರು. ವಿಠ್ಠಲದಾಸ ಕಾಮತ ಪ್ರಾಸ್ತಾವಿಕ ಮಾತನಾಡಿದರು.
ಗೌರವಾಧ್ಯಕ್ಷ ರಾಘು ಕಾಕರಮಠ ವಂದಿಸಿದರು. ಕಾರ್ಯದರ್ಶಿ ವಿದ್ಯಾಧರ ಮೊರಬಾ, ಪತ್ರಕರ್ತರಾದ ನಾಗರಾಜ ಜಾಂಬಳೇಕರ, ಮಾರುತಿ ಹರಿಕಂತ್ರ, ದಿನಕರ ನಾಯ್ಕ ಉಪಸ್ಥಿತರಿದ್ದರು. ಯೋಗೆಶ ಮಿರ್ಜಾನ ನಿರೂಪಿಸಿದರು.