ಅಂಕೋಲಾ : ಇಲ್ಲಿತ ಸಾರಿಗೆ ಘಟಕದ ಕುಶಲಕರ್ಮಿ ಸಿಬ್ಬಂದಿ ಸುಬ್ರಹ್ಮಣ್ಯ ಆರ್ ಬಂಟ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಉತ್ತಮ ಸಿಬ್ಬಂದಿ ಪ್ರಶಂಸನಾ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಬೇಳಾ ಬಂದರಿನ ಪ್ರಮುಖರು ಅಂಕೋಲಾ ಘಟಕಕ್ಕೆ ಆಗಮಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ ಸೌಮ್ಯ ಸ್ವಭಾವದ ಸುಬ್ರಹ್ಮಣ್ಯ ಬಂಟ ಅವರುಇಲಾಖೆಯಲ್ಲಿ ಎಲ್ಲರೊಂದಿಗೆ ಸರಳತೆಯಿಂದ ಬೆರೆತು ಎಲ್ಲರ ಪ್ರೀತಿಗೆ ಪಾತ್ರರಾದವರು ವಿಶೇಷವಾಗಿ ಶ್ರಮಜೀವಿ, ಇವರಿಗೆ ಪ್ರಶಸ್ತಿ ಲಭಿಸಿರುವದು ಹುಟ್ಟೂರು ಬೇಳಾಬಂದರಿಗೆ ಹೆಮ್ಮೆ ತಂದಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ ಸುಬ್ರಮಣ್ಯ ಬಂಟ ಅವರು ತನ್ನ ವೃತ್ತಿಯಲ್ಲಿ ಅಚ್ಚುಕಟ್ಟುತನ ಮೆರೆಯುತ್ತ, ಇಲಾಖೆಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಬೇಳಾದ ಮಂಜುನಾಥ ಡಿ ನಾಯ್ಕ ಮಾತನಾಡಿ ಸುಬ್ರಮಣ್ಯ ಬಂಟ ಅವರಿಗೆ ಪ್ರಶಸ್ತಿ ಲಭಿಸುರುವದುನಮ್ಮೂರಿನ ಹೆಮ್ಮೆಗೆ ಗರಿ ಮೂಡಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಬೇಳಾದ ಸುಜೀತ ಎನ್ ನಾಯ್ಕ, ಅನೀಲ ನಾಯ್ಕ, ಮೋಹನ ಬಿ ನಾಯ್ಕ, ಅಂಕೋಲಾ ಡಿಪೋದ ಸಹಾಯಕ ಕಾರ್ಯ ಅಧೀಕ್ಷಕ ಹರೀಶ ಖಾರ್ವಿ, ಸಂಚಾರಿ ನಿಯಂತ್ರಕ ಪ್ರಕಾಶ ನಾಯ್ಕ, ಭದ್ರತಾ ಹವಾಲ್ದಾರ್ ಎಸ್.ಎಮ್. ಕಡ್ಲೆ, ಕಿರಿಯ ಸಹಾಯಕಿ ವೇದಾ ಸುನೀಲ ನಾಯ್ಕ, ಸಹಾಯಕ ಉಗ್ರಾಣ ಪಾಲಕಿ ಮಹಾಲಕ್ಮೀ ಎಲ್. ನಾಯ್ಕ, ತಾಂತ್ರಿಕ ಸಹಾಯಕರಾದ ಡಿ.ಜಿ. ನಾಯ್ಕ, ಎನ್‌.ಕೆ.ಮಡಿವಾಳ , ಕಿರಿಯ ಸಹಾಯಕ ಸಾಗರ ನಾಯ್ಕ, ನಿರ್ವಾಹಕ ಸುರೇಶ ನಾಯ್ಕ ಇನ್ನಿತರರು‌ ಇದ್ದರು.