ಬೃಹತ ಗಾತ್ರದ ರಾಷ್ಟçಧ್ವಜದ ಮೂಲಕ ಗೌರವ ಸಮರ್ಪಿಸಿದ ಕೆ.ಎಲ್. ಶಿಕ್ಷಣ ಮಹಾವಿದ್ಯಾಲಯ

ಚಂದ್ರಯಾನ 3 ಯಶಸ್ಸಿನ ಸಂಭ್ರಮಾಚರಣೆ

ಅ0ಕೋಲಾ : ವಿಕ್ರಂ ಲ್ಯಾಂಡರ್ ಚಂದ್ರಯಾನ – 3 ಯಶಸ್ಸಿಯಾದ ಹಿನ್ನಲೆಯಲ್ಲಿ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೃಹತ ಗಾತ್ರದ ರಾಷ್ಟçಧ್ವಜವನ್ನು ಇಸ್ರೋ ಮಾದರಿಯಲ್ಲಿ ಪ್ರದರ್ಶಿಸುವ ಮೂಲಕ ರಾಷ್ಟಾçಭಿಮಾನಕ್ಕೆ ಗೌರವ ಸಮರ್ಪಿಸಿದರು.

ಗುರುವಾರ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ಸಂಘದ ಅಡಿಯಲ್ಲಿ ಜರುಗಿದ ಚಂದ್ರಯಾನ – 3 ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಇಟಗಿ ಮಾತನಾಡಿ ಮನುಕುಲದ ಏಳಿಗೆಗಾಗಿ ನಿರಂತರ ಪರಿಶ್ರಮದಿಂದ ಇಸ್ರೊ ವಿಜ್ಞಾನಿಗಳು ಚಂದ್ರನ ದಕ್ಷಿಣ ಭಾಗದಲ್ಲಿಯೇ ಅಧ್ಯಯನಕೆಂದು ಚಂದ್ರಯಾನ – 3ನ್ನು ಯಶಸ್ವಿಗಳಿಸಿರುವದು ದೇಶದ ಹೆಮ್ಮೆಯ ಅಭಿಮಾನಕ್ಕೆ ಗರಿ ಮೂಡಿಸಿದಂತಾಗಿದೆ ಎಂದರು.

 ವಿಜ್ಞಾನ ಸಂಘದ ಉಪಾಧ್ಯಕ್ಷ ರಾಘವೇಂದ್ರ ಅಂಕೋಲೆಕರ ಮಾತನಾಡಿ ಕಳೆದ 50 ವರ್ಷಗಳಿಂದ ಚಂದ್ರನ ಮೇಲೆ ಹಲವಾರು ದೇಶಗಳು ಅಧ್ಯಯನ ಮಾಡುತ್ತಾ ಬಂದಿವೆ. ಅದರಲ್ಲಿ ಭಾರತವು ಯಶಸ್ವಿ 4 ದೇಶಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿರುವ ಸಂಪನ್ನೂ÷್ಮಲಗಳ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ ಎಂದರು.

 ಪ್ರಶಿಕ್ಷಣಾರ್ಥಿಗಳಾದ ಮನೋಜ ಗೌಡ, ಪ್ರತೀಕ ನಾಯಕ ಮಾತನಾಡಿದರು. ಸಂಪ್ರಿಯಾ ಎಸ್ ಸಂಗಡಿಗರು ಪ್ರಾರ್ಥಿಸಿದರು. ಶ್ವೇತಾ ಪಟಗಾರ ಸ್ವಾಗತಿಸಿದರು. ದೀಪಾಲಿ ನಾಯಕ ನಿರೂಪಿಸಿದರು. ರಕ್ಷಾ ಹೊಸಮನೆ ವಂದಿಸಿದರು. ಉಪನ್ಯಾಸಕಿಯರಾದ ಅಮ್ರಿನಾಜ್ ಶೇಖ, ಪೂರ್ವಿ ಹಳ್ಗೇಕರ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

 ಸಿಹಿ ತಿಂಡಿಯ ವಿತರಣೆ, ದೇಶ ಭಕ್ತಿಯ ಗೀತೆಯ ನೃತ್ಯ, ಧ್ವಜ ಪುಷ್ಟಾರ್ಚನೆ ಕಾರ್ಯಕ್ರಮಗಳು ವಿಶೇಷವಾಗಿ ಗಮನ ಸೆಳೆದವು