ಜಲ ದಿಗ್ಬಂಧನಕ್ಕೊಳಗಾಗಿ ಕಾಲು ಕಡಿದುಕೊಂಡವನ ಗೋಳಾಟ
8 ದಿನ ನರಳಾಟ – 15 ಕೀಮಿ ನಡೆದಾಟ

ರಾಘು ಕಾಕರಮಠ – ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಆಕಸ್ಮಿಕವಾಗಿ ಕತ್ತಿಯಿಂದ ಕಾಲು ಕಡಿದುಕೊಂಡು ತ್ವರಿತವಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಾದಾಗ ಅನಿವಾರ್ಯತೆ ಎದುರಾದರೂ ಸಹ ಗ್ರಾಮದ ಸುತ್ತಲು ಹಳ್ಳ ತುಂಬಿದ್ದರಿAದ ದಿಗ್ಬಂಧನಕ್ಕೊಳಗಾಗಿ 8 ದಿನಗಳ ಕಾಲ ಗಾಯದ ನೋವಿನಲ್ಲಿ ಮನೆಯಲ್ಲಿಯೆ ನರಳಾಟ ನಡೆಸಿದ ನಂತರ ಆತನನ್ನು 15 ಕೀಮಿ ಹೊತ್ತುಕೊಂಡೆ ಆಸ್ಪತ್ರೆಗೆ ದಾಖಲಿಸಿದ ಘಟನೆ ತಾಲೂಕಿನ ಕೆಂದಗಿ ಗ್ರಾಮದಲ್ಲಿ ನಡೆದಿದೆ.
ಆಗಿದ್ದೇನು..?
ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಕೆಂದಗಿ ಗ್ರಾಮವು ಮಳೆಗಾಲ ಬಂತೆAದರೆ ಸಾಕು ಪ್ರತಿ ವರ್ಷವು ಸಹ ಇಲ್ಲಿರುವ ನಾಲ್ಕು ಹಳ್ಳಗಳು ತುಂಬಿ ಇಲ್ಲಿನ ಗ್ರಾಮಗಳು ದಿಗ್ಬಂಧನಕ್ಕೊಳಗಾಗುತ್ತವೆ. ಇಂತಹ ವಿಷಮ ಪರಿಸ್ಥಿತಿ ಇರುವಾಗ ಕೆಂದಗಿ ಗ್ರಾಮದ ರೈತ ಉಮೇಶ ರಾಮಾ ಗೌಡ ಅವರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕತ್ತಿಯ ಏಟು ಕಾಲಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.

ಇತನನ್ನು ಆಸ್ಪತ್ರೆಗೆ ಕರೆ ತರಬೇಕೆಂದರೆ ಬೊಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ದೊಡ್ಡ ಹಳ್ಳವನ್ನು ದಾಟಿ ಬರಬೇಕಾಗಿತ್ತು. ಆದರೆ ಹಳ್ಳವು ತುಂಬಿ ಹರಿಯುತ್ತಿರುವದರಿಂದ, ಹಳ್ಳ ದಾಟಲಾಗದೆ ಅರಣ್ಯರೋಧನ ಅನುಭವಿಸುವಂತಾಗಿತ್ತು.
ಕಳೆದ 5-6 ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಹಳ್ಳದ ಹರಿವಿನ ವೇಗ ಸ್ವಲ್ಪ ಕಡಿಮೆಯಾಗಿತ್ತು. ಕೆಂದಗಿ ಗ್ರಾಮಸ್ಥರು, ಹಟ್ಟಿಕೇರಿ ಅರಣ್ಯ ಇಲಾಖೆಯ ಗಾರ್ಡ ಬೀರಾ ಗೌಡ ಅವರ ಸಹಕಾರದೊಂದಿಗೆ ಗಾಯಗೊಂಡ ರೈತನನ್ನು ಬಿದಿರಿನ ಕಂಬಕ್ಕೆ ಬಟ್ಟೆಯನ್ನು ಕಟ್ಟಿ, ಅದರೊಳಕ್ಕೆ ಆತನನ್ನು ಮಲಗಿಸಿಕೊಂಡು 15 ಕೀಮಿ ಕಡಿದಾದ ಅರಣ್ಯ ರಸ್ತೆಯಲ್ಲಿ, ಹರಸಾಹಸ ಪಟ್ಟು 4 ಹಳ್ಳವನ್ನು ದಾಟಿಕೊಂಡು ಅಂತೂ ಹಟ್ಟಿಕೇರಿಯ ರಾಷ್ಟಿçÃಯ ಹೆದ್ದಾರಿಗೆ ಬಂದು ತಲುಪಿದ್ದಾರೆ.

ಅಲ್ಲಿಂದ ವಾಹನದಲ್ಲಿ ಕಾರವಾರದ ವೈಧ್ಯಕೀಯ ಮಹಾವಿದ್ಯಾಲಯಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ವೈದ್ಯರು ಕೂಡಲೆ ಚಿಕಿತ್ಸೆಗೆ ಒಳಪಡಿಸಿದ್ದು, ಗಾಯಗೊಂಡ ರೈತ ಉಮೇಶ ನಾಯ್ಕ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದಾರೆ.
ಅತಿ ಕುಗ್ರಾಮವಾದ ಕೆಂದಗಿ ಗ್ರಾಮಕ್ಕೆ ಅತ್ತ ಸರಿಯಾದ ರಸ್ತೆಯು ಇಲ್ಲದೆ, ಇತ್ತ ಹಳ್ಳ ದಾಟಲು ಸೇತುವೆಯು ಇಲ್ಲದೆ ಇಲ್ಲಿಯ ಜನರು ಸಂಕಷ್ಠದ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ. ಸರಕಾರ ಈ ಬಗ್ಗೆ ಕ್ರಮವಹಿಸಿ ನಾಗರಿಕರ ಅಹವಾಲು ಆಲಿಸಿ, ಮೂಲಭೂತ ಸೌಲಭ್ಯ ಒದಗಿಸಕೊಡುವಂತೆ ಎ.ಬಿ.ವಿ.ಬಿ. ಪ್ರಮುಖ ರಾಘವೆಂದ್ರ ನಾಯ್ಕ ಹಟ್ಟಿಕೇರಿ ಆಗ್ರಹಿಸಿದ್ದಾರೆ.
