ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಅನ್ನಸಂತರ್ಪಣೆ
ಮ0ಜುನಾಥ ನಾಯಕ ಮತ್ತು ಗೋಪು ನಾಯಕ ಅಡ್ಲೂರು ಕುಟುಂಬದವರಿ0ದ ಅನ್ನ ಸಂತರ್ಪಣೆಯ ಸೇವೆ
ಅಂಕೋಲಾ : ಈ ಸಹೋದರರು ಕಠಿಣ ಪರಿಶ್ರ್ರಮದ ನಡುವೆ ಮೇಲೆದ್ದು ಬಂದವರು. ಎಲ್ಲರೊಂದಿಗೆ ಆತ್ಮೀಯರಾಗಿ ತನ್ನದೇ ಆದ ಸ್ನೇಹಿತರ ಬಳಗವನ್ನು ಹೊಂದಿರುವ ಸಹೋದರರೆ ಅಡ್ಲೂರಿನ ಮಂಜುನಾಥ ನಾಯಕ ಹಾಗೂ ಗೋಪು ನಾಯಕ ಅಡ್ಲೂರು.
ಕಳೆದ ಒಂದುವರೆ ವರ್ಷದ ಹಿಂದೆ ಪಟ್ಟಣದ ಕಾಕರಮಠ ರಸ್ತೆಯಲ್ಲಿ ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಸಹಕಾರಿಯನ್ನು ಸ್ಥಾಪಿಸಿ ಸಹಕಾರಿ ರಂಗಕ್ಕೆ ಕಾಲಿಟ್ಟ ಮಂಜುನಾಥ ನಾಯಕ ಹಾಗೂ ಗೋಪು ನಾಯಕ ಅವರು ತಮ್ಮ ಸಹಕಾರಿಯನ್ನು ಯಶಸ್ಸಿನತ್ತ ಮುನ್ನುಗ್ಗಿಸಿದವರು. ಎಲ್ಲರೊಂದಿಗೂ ಆತ್ಮೀಯರಾಗಿರುವ ಇವರು ತಮ್ಮ ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಅಂಕೋಲಾದ ದೊಡ್ಡ ದೇವರೆಂದೆ ಖ್ಯಾತಿ ಹೊತ್ತ ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಶ್ರಾವಣದ ಎರಡನೆ ಶನಿವಾರದಂದು ವಿಶೇಷವಾಗಿ ೭ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಪ್ರಸಾದ ವಿತರಿಸಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದುಕೊಟ್ಟು ಮಾದರಿಯಾಗಿದ್ದಾರೆ. ಅನ್ನಪೂರ್ಣ ಕ್ರೆಡಿಟ್ ಕೋ ಆಫ್ರೇಟಿವ್ ಸೌಹಾರ್ದದ ಅಧ್ಯಕ್ಷ ಮಂಜುನಾಥ ನಾಯಕ ಮತ್ತು ಉಪಾಧ್ಯಕ್ಷ ಗೋಪು ನಾಯಕ ಕುಟುಂಬದವರು ವಾರದ ಅನ್ನ ಸಂತರ್ಪಣಾ ಕಾರ್ಯದ ಪ್ರಾಯೋಜಕತ್ವವನ್ನು ವಹಿಸಿಕೊಂಡು ಸಹಸ್ರಾರು ಭಕ್ತರ ಆಶೀರ್ವಾದ ಪಡೆದರು. ಈ ಅನ್ನ ಸಂತರ್ಪಣಾ ಕಾರ್ಯದಲ್ಲಿ ತಾಲೂಕಿನ ವಿವಿಧ ಪ್ರಮುಖರು, ಭಕ್ತಾಧಿಗಳು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಗೋಪು ಹಾಗೂ ಮಂಜು ಸಹೋದರ ಹಿತೈಷಿಗಳ ಬಳಗವು ತಾವೆ ತಮ್ಮ ಕೈಯಾರೆ ಬಂದ ಭಕ್ತಾಧಿಗಳಿಗೆ ಅನ್ನ ಬಡಿಸಿ ಕೃತಾರ್ಥರಾದರು.
ಉಪಸ್ಥಿತರು :
ಶ್ರೀ ವೆಂಕಟ್ರಮಣ ದೇಗುಲದ ಧರ್ಮದರ್ಶಿ ಮಯೂರ ನಾಯಕ, ನ್ಯಾಯವಾದಿ ನಾಗರಾಜ ನಾಯಕ, ತ್ರೀವೇಣಿ ಗೋಪಾಲ ನಾಯಕ, ಪ್ರಜ್ಚಲಾ ಮಂಜುನಾಥ ನಾಯಕ, ಅಂಕೋಲಾ ಅರ್ಬನ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ, ಹಿರಿಯರಾದ ಆರ್.ಟಿ.ಮಿರಾಶಿ, ಉದ್ಯಮಿಗಳಾದ ವಿನಾಯಕ ಕಾಮತ, ಕಾರವಾರದ ತಹಸೀಲ್ದಾರ ನರೋನಾ, ನೋಟರಿ ಸಂಘದ ಜಿಲ್ಲಾಧ್ಯಕ್ಷ ನಾಗಾನಂದ ಬಂಟ, ಎಮ್.ಎಚ್. ಭವ್ಯಾ, ರಂಜನ ಹಿಚ್ಕಡ, ಪಿಎಸೈ ಪ್ರವೀಣಕುಮಾರ, ಅರ್ಪಿತಾ ಪ್ರವೀಣಕುಮಾರ, ಅಂಕೋಲಾ ಠಾಣೆಯ ಪಿಎಸೈ ಸುನೀಲ, ಗಣಪತಿ ನಾಯಕ ಮೂಲೆಮನೆ, ಜೈರಾಮ ನಾಯಕ ಸೂರ್ವೆ, ಹರೀಶ ನಾಯಕ ಬಾಸಗೋಡ, ನಾರಾಯಣ (ನನ್ನಿ) ಡಿ. ನಾಯಕ, ರಾಜು ಕಳಸ, ಗುರುರಾಜ ಹಮ್ಮಣ್ಣ ನಾಯಕ ವಂದಿಗೆ, ಜಿ.ಪಂ. ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, , ನ್ಯಾಯವಾದಿಗಳಾದ ವಿನೋದ ಶಾನಭಾಗ, ಉಮೇಶ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕೆ.ಡಿ.ಸಿ.ಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಾಗೇಶ ನಾಯಕ, ಕುಮಟಾ ತಾ.ಪಂ. ಮಾಜಿ ಸದಸ್ಯ ರಾಜೇಶ ನಾಯಕ ಹಿಚ್ಕಡ, ಬಿಂದೇಶ ನಾಯಕ, ಅಗಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಕರ್ನಾಟಕ ರಕ್ಷಣಾ ವೇದಿಯ ಅಧ್ಯಕ್ಷ ಸುನೀಲ ನಾಯ್ಕ, ಅಂಕೋಲಾ ಡಿಪೋ ಮ್ಯಾನೇಜರ್ ರಾಜೇಶ ರ್ಕಾಲ, ವಿಜಯಕುಮಾರ ವಾಯ. ನಾಯ್ಕ, ಮಣಿ ಅಗಸೂರು, ಮಹೇಶ ಅವರ್ಸಾ, ರಮೇಶ ಮಾಸ್ತರ, ಗಂಪು ಬೇಲೇಕೇರಿ, ಹಿತೇಶ ಭಾವಿಕೇರಿ, ರಾಜಶೇಖರ ಭಾವಿಕೇರಿ, ಬೊಮ್ಮಯ್ಯ ಅಡ್ಲೂರು, ಪುಟ್ಟು ಶಿರಗುಂಜಿ, ದೀರು ಬೇಲೇಕೇರಿ, ಸೇರಿದಂತೆ ಇನ್ನು ಇತರ ಗಣ್ಯರು ಉಪಸ್ಥಿತರಿದ್ದರು.
ಶ್ರಾವಣ ಶನಿವಾರದ ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸರತಿ ಸಾಲು ಎರಡು ದಿಕ್ಕಿನಲ್ಲಿದ್ದರೂ, ಅರ್ಧ ಕಿ.ಮೀ.ಗಿಂತ ಮುಂದೆ ಸಾಗಿತ್ತು. ಅನ್ನ ಸಂತರ್ಪಣೆಯ ವೇಳೆ ನೂಕುನುಗ್ಗಲು ಉಂಟಾಗಿ ಪೊಲೀಸರು ಪರಿಶ್ರಮ ಪಟ್ಟು ಶಾಂತತೆ ಕಾಪಾಡುವಲ್ಲಿ ನೆರವಾದರು.
ಅನ್ನದಾನದಿಂದ ಮನಸ್ಸಿಗೆ ತೃಪ್ತಿ ತಂದಿದೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ದೇವರ ಹಾಗೂ ಜನರ ಆರ್ಶಿವಾದ ಪಡೆದಿದ್ದೇನೆ. ಪ್ರಸಾದ ಸ್ವೀಕರಿಸಿ ಎಲ್ಲರಿಗೂ ಕೃತಜ್ಞತಗಳು. ದೇವರು ನಿಮ್ಮ ಇಷ್ಠಾರ್ಥವನ್ನು ದಯಪಾಲಿಸಲಿ.
– ಮಂಜುನಾಥ ನಾಯಕ, ಅಧ್ಯಕ್ಷರು ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ
ಕ್ರೀಯಾಶೀಲ ತರುಣರಾದ ಮಂಜುನಾಥ ನಾಯಕ ಮತ್ತು ಗೋಪು ನಾಯಕ ಸಮಾಜಮುಖಿಯಾಗಿ ಎಲ್ಲರೊಂದಿಗೂ ಚೆನ್ನಾಗಿದ್ದು ಮಾದರಿಯಾಗಿದ್ದಾರೆ. ಈ ಮೂಲಕ ಸರ್ವ ಭಕ್ತ ವೃಂದಕ್ಕೂ ಅನ್ನ ಸಂತರ್ಪಣೆಯ ಮೂಲಕ ಸಹೋದರರಾದ ಮಂಜುನಾಥ ನಾಯಕ ಮತ್ತು ಗೋಪು ನಾಯಕ ಕುಟುಂಬದವರು ಅನ್ನ ಪ್ರಸಾದ ವಿತರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಸಮಾಜದ ಶ್ರೇಯಸ್ಸಿಗೂ ಕಾರಣವಾಗುತ್ತವೆ.- ನಾಗರಾಜ ನಾಯಕ, ಖ್ಯಾತ ನ್ಯಾಯವಾದಿಗಳು, ಕಾರವಾರ
ಅಂಕೋಲೆಯ ದೊಡ್ಡ ದೇವರೆಮದೆ ಖ್ಯಾತಿ ಹೊತ್ತ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಹೊಸ ಮೆರಗನ್ನು ತಂದು ತಮದು ಕೊಟ್ಟವರೆಂದರೆ ದಿ. ಆರ್.ಎನ್. ನಾಯಕ. ಈಗ ಅವರ ಮಗ ಮಯೂರ ನಾಯಕ ಅವರ ಮಾರ್ಗದರ್ಶನದಲ್ಲಿ ಅಂಕೋಲೆಯಲ್ಲಿ ಮಿನಿ ತಿರುಪತಿಯ ದರ್ಶನ ನಮಗಾಗುತ್ತಿದೆ. ಈ ಮೂಲಕ ಸಹಸ್ರಾರು ಭಕ್ತಾಧಿಕಾಗಳಿಗೆ ಅನ್ನ ಸೇವೆ ಮಾಡುತ್ತಿರುವದು ಅತ್ಯಂತ ಖುಷಿ ತಂದಿದೆ. -ಗೋಪಾಲ ನಾಯಕ. ಉಪಾಧ್ಯಕ್ಷರು ಅನ್ನಪೂರ್ಣ ಕ್ರೆಡಿಟ್ ಸೌಹಾರ್ದ.