ಅಂಕೋಲಾ : ಇನೋವಾ ಕಾರುವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿ ಓರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಸರಳೆಬೈಲ್ ಬಳಿ ನಡೆದಿದೆ.
ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಬರುತ್ತಿದ್ದ ಆಂಧ್ರಪ್ರದೇಶ ನೊಂದಣಿ ಹೊಂದಿರುವ ಇನೋವಾ ಕಾರು ಅಪಘಾತಕ್ಕೆ ಇಡಾಗಿದೆ. ಈ ಕಾರಿನಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು ಆರು ಜನರಲ್ಲಿ ನಾಲ್ಕು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಓರ್ವನಿಗೆ ಗಂಭೀರ ಗಾಯಗಳಾಗಿದೆ. ಇನ್ನೊರ್ವ ಪ್ರಯಾಣಿಕ ಮೃತಪಟ್ಟಿರುತ್ತಾನೆ.
ಸ್ಥಳಕ್ಕೆ 112 ವಾಹನದ ಪೋಲಿಸ್ ಸಿಬ್ಬಂದಿಗಳು ಆಗಮಿಸಿ ಗಾಯಾಳುಗಳನ್ನ ಮತ್ತು ಮೃತ ವ್ಯಕ್ತಿಯನ್ನು ಸಾಗಿಸಲು ಸಹಕರಿಸಿದ್ದಾರೆ. ಆಂದ್ರ ಮೂಲದ ರೋಹಿತ ಎನ್ನುವ ವ್ಯಕ್ತಿ ಮೃತಪಟ್ಟವ ಎಂದು ತಿಳಿದು ಬಂದಿದೆ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತದ್ದು ಅವರ ವಿವರ ಇನ್ನಷ್ಟೆ ತಿಳಿದು ಬರಬೇಕಿದೆ.