ಅಂಕೋಲಾ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಅಂಕೋಲಾ ವತಿಯಿಂದ ವಯೋ ನಿವೃತ್ತಿ ಹೊಂದಿದ ರಾಧಾಕೃಷ್ಣ ವೆಂಕಟರಮಣ ನಾಯಕ ಸ.ಹಿ.ಪ್ರಾ ಶಾಲೆ ವಾಡಿಬೊಗ್ರಿ ಅವರನ್ನು ಅವರ ಮನೆಯಂಗಳದಲ್ಲಿ ಆತ್ಮೀಯವಾಗಿ ಗೌರವಿಸಿ ಬೀಳ್ಕೊಡುವ ಸಮಾರಂಭ ನಡೆಯಿತು.

ಗೌರವ ಸ್ವೀಕರಿಸಿ ಮಾತನಾಡಿದ ರಾಧಾಕೃಷ್ಣ ನಾಯಕ ಸುದೀರ್ಘ ವರ್ಷಗಳ ಕಾಲ ಶಿಕ್ಷಣ ರಂಗದಲ್ಲಿ ಶಿಕ್ಷಕನಾಗಿ ಸಲ್ಲಿಸಿದ ಸೇವೆ ಆತ್ಮತೃಪ್ತಿಯನ್ನು ತಂದಿದೆ. ಸಂಘ ಮನೆಯಂಗಳಕ್ಕೆ ಬಂದು ಗೌರವಿಸಿರುವುದು. ಹೆಮ್ಮೆಯನ್ನು ತಂದಿದೆ. ನಾನು ಕಲಿಸಿದ ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿರುವುದು ಸಾರ್ಥಕ್ಯವನ್ನು ತಂದಿದೆ ಎಂದರು.

ಸನ್ಮಾನಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ ವೃತ್ತಿ ಜೀವನ ಪೂರ್ತಿ ವಿದ್ಯಾರ್ಥಿಗಳ ಅಭ್ಯುದಯವನ್ನೇ ಪಣವಾಗಿಸಿಕೊಂಡು ತಾವೂ ಸನ್ಮಾರ್ಗದಲ್ಲಿ ನಡೆದು, ವಿದ್ಯಾರ್ಥಿಗಳನ್ನೂ ಸನ್ಮಾರ್ಗದಲ್ಲಿಯೇ ನಡೆಸಿಕೊಂಡು, ಇದೀಗ ವೃತ್ತಿ ಜೀವನವನ್ನು ಸಾರ್ಥಕತೆಯಿಂದ ಪೂರೈಸುತ್ತಿರುವ ಶಿಕ್ಷಕ ರಾಧಾಕೃಷ್ಣ ನಾಯಕರನ್ನು ನಿವೃತ್ತಿಯ ಈ ಸಂದರ್ಭದಲ್ಲಿ ಪ್ರೀತ್ಯಾದರಪೂರಕವಾಗಿ ಅಭಿಮಾನದಿಂದ ಅಭಿನಂದಿಸಲು ಸಂಘ ಹೆಮ್ಮೆ ಪಡುತ್ತದೆ ಎಂದರು.

ಸದಸ್ಯ ಶೇಖರ ಗಾಂವಕರ, ಶಿಕ್ಷಕ ರಾಜೇಶ ಮಾಸ್ತರ ಸೂರ್ವೆ ಅಭಿನಂದಿಸಿ ಮಾತನಾಡಿದರು. ಸದಸ್ಯರಾದ ಲಕ್ಷಿö್ಮÃ ಎನ್. ನಾಯಕ, ವೆಂಕಮ್ಮ ಬಿಂದೇಶ ನಾಯಕ, ಶೋಭಾ ಎಸ್. ನಾಯಕ, ಆನಂದು ವಿ. ನಾಯ್ಕ, ಸಂಜೀವ ಆರ್. ನಾಯಕ, ಶಿಕ್ಷಕರಾದ ವೇಲಾಯುಧ ನಾಯರ, ರಾಮಚಂದ್ರ ನಾಯಕ, ವಾಸುದೇವ ನಾಯಕ, ಬಾಲಕೃಷ್ಣ ನಾಯಕ, ಕುಟುಂಬಸ್ಥರಾದ ಸವಿತಾ ಗಾಂವಕರ, ರಕ್ಷಿತಾ ನಾಯಕ, ಗೋಪಾಲಕೃಷ್ಣ ನಾಯಕ, ಗೀತಾ ಜಿ. ನಾಯಕ, ನಾರಾಯಣ ವಿ. ನಾಯಕ, ಸಂಗೀತಾ ನಾಯಕ, ನಿರುಪಮಾ ನಾಯಕ, ವಿಜಯ ನಾಯಕ, ಮಂಗಲಾ ನಾಯಕ, ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷೆ ಭಾರತಿ ಬಿ. ನಾಯಕ ವಂದಿಸಿದರು. ಶೀಳ್ಯ ಊರ ನಾಗರಿಕರು ಉಪಸ್ಥಿತರಿದ್ದರು.