ಅಂಕೋಲಾ : ಅಫಘಾತಗೊಂಡ ಕಾರವೊಂದರಲ್ಲಿ ಲಕ್ಷಾಂತರ ರೂಪಾಯಿಯ ಅಕ್ರಮ ಗೋವಾ ಸರಾಯಿ ಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ಸುಂಕಸಾಳದ ಕೋಟೆಪಾಲ ಕ್ರಾಸ್ ಬಳಿ ನಡೆದಿದೆ.

ಕಾರನಲ್ಲಿ 1 ಲಕ್ಷದ 33 ರೂ ಸಾವಿರ ಮೌಲ್ಯದ ಅಕ್ರಮ ಗೋವಾ ಸರಾಯಿ ಪತ್ತೆಯಾಗಿದ್ದು, ಕಾರ ಚಾಲಕ ಹಾಗೂ ಮಾಲಕ ನಾಪತ್ತೆಯಾಗಿದ್ದಾರೆ.

ನಡೆದದ್ದೇನು.? 

ಗೋವಾ ಸರಾಯಿಯನ್ನು ಎಲ್ಲಿಂದಲೊ ತುಂಬಿಕೊಂಡು, ಮಾರಾಟ ಮಾಡುವ ಉದ್ದೇಶದಿಂದ ಯಲ್ಲಾಪುರ ಕಡೆಗೆ ಸಾಗಿಸುತ್ತಿದ್ದಾಗ, ಚಾಲಕನ ಅತಿ ವೇಗದ ಚಾಲನೆಯಿಂದಾಗಿ ರಸ್ತೆಯ ಬದಿಯ ಚರಂಡಿಗೆ ಕಾರ ಉರುಳಿ ಬಿದ್ದಿದೆ. 

ಅಫಘಾತಗೊಂಡ ಕಾರ ಜಖಂಗೊಂಡಿದ್ದರಿಂದ ಕಾರ ರಸ್ತೆಗೆ ಬರಲಾಗಿರಲಿಲ್ಲ. ಎಲ್ಲಿ ತಮ್ನ ಅಕ್ರಮ ಚಟುವಟಿಕೆ ಬಯಲಾಗುತ್ತದೆ ಎಂಬ ಭಯಕ್ಕೆ ಹೆದರಿ ಚಾಲಕ ಕಾರನ್ನು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾನೆ.

ಅಂಕೋಲಾ ಪೊಲೀಸರಿಗೆ ಸುಂಕಸಾಳದ ಬಳಿ ಕಾರ ಅಪಘಾತಗೊಂಡಿದೆ ಎಂಬ ಮಾಹಿತಿ ಬಂದಿದ್ದರಿಂದ, ಪಿಎಸೈ ಜಯಶ್ರೀ ಪ್ರಭಾಕರ ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಾರನಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ಗೋವಾ ಸರಾಯಿ ಇರುವುದು ಕಂಡು ಬಂದಿದೆ.

ವಾಹನದ ಮಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪಿಎಸೈ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.