ಅಂಕೋಲಾ : ತನ್ನದೇ ಆದ ಚಾರಿತ್ರಿಕ ಇತಿಹಾಸ ದಾಖಲಿಸಿದ ಭಾರತ ಜೋಡೊ ಯಾತ್ರೆಯು ಒಂದು ವರ್ಷ ಪೂರೈಸಿದೆ. ಈ ಸಂಭ್ರಮವನ್ನು ಇನ್ನಷ್ಟು ವೈಭವಿಕರಿಸುವ ನಿಟ್ಟಿನಿಲ್ಲಿ ಸೆಪ್ಟೆಂಬರ್ 8 ರಂದು ಹಳಿಯಾಳದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನ ಏರ್ಪಡಿಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಹೇಳಿದರು.

ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಈ ಕಾರ್ಯಕ್ರಮವನ್ನು ಶಾಸಕ ಆರ್.ವಿ. ದೇಶಪಾಂಡೆ ಅವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಭಾರತ ಜೋಡೊ ಕಾರ್ಯಕ್ರಮವು ರಾಹುಲ ಗಾಂದಿ ಅವರ ಕನಸಿನ ಕೂಸು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕೀಮೀ ನಷ್ಟು ಪಾದಯಾತ್ರೆ ಮಾಡಿ ಈಡೀ ದೇಶದ ಜನತೆಯನ್ನ ಪ್ರೀತಿಯಿಂದ ಒಗ್ಗೂಡಿಸುವ ಕಾರ್ಯಕ್ರಮ ಇದಾಗಿತ್ತು.

ಎಲ್ಲ ಭಾರತೀಯರ ಮನಸನ್ನು ಮತ್ತು ಸೌಹಾರ್ದತೆಯನ್ನ ಬೆಸೆದ ಈ ಕಾರ್ಯಕ್ರಮವು ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳವಂತಾಗಿತ್ತು. ಈ ಯಶಸ್ವಿ ಕಾರ್ಯಕ್ರಮದ ಒಂದು ವರ್ಷದ ಸವಿ ನೆನಪಿಗಾಗಿ ಹಳಿಯಾಳದ ತೆರಗಾಂವದಿAದ ಹಳಿಯಾಳದವರೆಗೆ ಪಾದಯಾತ್ರೆ ನಡೆಯಲಿದೆ.

ಕಾರ್ಯಕ್ರಮವು ಸಚಿವರ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಸಮ್ಮುಖದಲ್ಲಿ ಕಾರ್ಯಕ್ರಮವು ತೆರದುಕೊಳ್ಳಲಿದೆ. ಪಕ್ಷದ ಎಲ್ಲಾ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಎಲ್ಲ ಸೆಲ್‌ಗಳ ಪ್ರಮುಖರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರ0ಗ ಗೌಡ, ಡಿಸಿಸಿ ಕಾರ್ಯದರ್ಶಿ ವಿನೋದ ನಾಯಕ. ಬಾಸ್ಗೋಡ, ನೆಹರು ಮಂಚ್ ಬೋರ್ಡನ ಜಿಲ್ಲಾಧ್ಯಕ್ಷ ಪುರುಷೋತ್ತಮ ನಾಯ್ಕ, ಕಾಂಗ್ರೆಸ್ ಪಕ್ಷದ ಶಿಕ್ಷಕರ ಘಟಕದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ. ಸೂರ್ವೆ, ಹಿಂದುಳಿದ ವರ್ಗಗಳ ಮಾಜಿ ಜಿಲ್ಲಾಧ್ಯಕ್ಷ ಬಿ.ಡಿ. ನಾಯ್ಕ, ಕಾಂಗ್ರೆಸ್ ಡಿಜಿಟಲ ಮೀಡಿಯಾದ ಪ್ರಮುಖ ಸುರೇಶ ಅಸ್ಲಗದ್ದೆ, ಮಹೇಶ ಗೌಡ ಉಪಸ್ಥಿತರಿದ್ದರು.