ಕಾರವಾರ : ನಗರದ ಸಾಯಿಮಂದಿರಕ್ಕೆ ಸಾಗುವ ಸುಮಿತ್ರಾ ಲಾಡ್ಜ್ ನಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 6 ಎಲೆ ಮಾನವರನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಾಜುಭಾಗದ ಸಾಯಿಕಟ್ಟಾದ ಸೈಕಲ ಅಂಗಡಿ ಉದ್ಯೋಗಿ ಪ್ರದೀಪ ಜಗನ್ನಾಥ ಸಾಳಸ್ಕರ (45), ದೇವಳಮಕ್ಕಿಯ ಖಾರ್ಗಾದ ಇಲೆಕ್ಟೀಷಿನ ಕಿರಣ ಮೋಹನ ಕಾಂಬಳೆ (35), ಬಿಣಗಾದ ಗುನಗಿವಾಡಾದ ಮಹಾಬಲೇಶ್ವರ ಆನಂದು ಗುನಗಿ (54), ಬಿಣಗಾದ ಮಹಾಲಸಾ ರಸ್ತೆಯ ಶಾಮಿಯಾನ್ ಉದ್ಯೋಗಿ ಗಣೇಶ ಶೇಷು ನಾಯ್ಕ, ಬಿಣಗಾದ ದೇವಿದಾಸ ರಾಘೋಬಾ ಸಾಳಸ್ಕರ (61) ಹಾಗೂ ಹಳೆಗೆಜೂಗನ ಅನಿಲ ಈರಾ ನಾಗೇಕರ ಬಂಧಿತ ಆರೋಪಿಗಳು.

ನಡೆದದ್ದೇನು..?

ನಗರದ ಸಾಯಿಮಂದಿರಕ್ಕೆ ಸಾಗುವ ಸುಮಿತ್ರಾ ಲಾಡ್ಜ್ ಉದ್ಯೋಗಿ ಅನಿಲ ಈರಾ ನಾಗೇಕರ ಅವರ ಸಹಾಯದಿಂದ ಲಾಡ್ಜನ ನಾಲ್ಕನೇ ಮಹಡಿಯ 116 ನಂ ರೂಂನಲ್ಲಿ 5 ಆರೋಪಿಗಳು ಅಂದರ ಬಾಹರ ಆಟದಲ್ಲಿ ಸಾವಿರಾರು ಹಣವನ್ನು ಕಟ್ಟಿ ಜೂಜಾಟದಲ್ಲಿ ತೊಡಗಿದ್ದರು.

ಈ ಬಗ್ಗೆ ಖಚಿತ ಮಾಹಿತಿಯನ್ನ ಆದರಿಸಿ ಕಾರವಾರದ ನಗರ ಠಾಣೆಯ ಸಿಪಿಐ ಸಿದ್ದಪ್ಪ ಬಿಳಗಿ ಅವರ ದಾಳಿ ನಡೆಸಿ ಅಂದರ ಬಾಹರದಲ್ಲಿ ತೊಡಗಿದ್ದ ಐವರನ್ನು ಹಾಗೂ ಅಕ್ರಮ ಚಟುವಟಿಕೆಗೆ ಲಾಡ್ಜ್ ರೂಂ ನೀಡಿ ಸಹಕರಿಸಿದ ಒರ್ವ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ 27310 ನಗದು ಹಣ ಹಾಗು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಕಾರವಾರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.