ಅಂಕೋಲಾ : ಪಟ್ಟಣದ ಪ್ರತಿಷ್ಠಿತ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮುದ್ದು ಕೃಷ್ಣ ಮುದ್ದು ರಾಧೆ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಮಿಂಚಿ ಗಮನ ಸೆಳೆದರು. ಯಾವುದೇ ಬೇಧ ಭಾವವಿಲ್ಲದೆ ಎಲ್ಲಾ ಧರ್ಮದ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಭಾವೈಕ್ಯತೆಗೆ ಸಾಕ್ಷಿಯಾದರು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಜಯಾ ಬಾಲಕೃಷ್ಣ ನಾಯ್ಕ, ಪುಷ್ಪಲತಾ ನಾಯಕ, ಭಾಗೀರಥಿ ಹೆಗಡೆಕಟ್ಟೆ, ಶಾಂತಿ. ಬಿ. ನಾಯಕ, ಭಾರತಿ ನಾಯ್ಕ್ ಉಪಸ್ಥಿತರಿದ್ದರು.
ನೂರಾರು ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಎಲ್ಲರ ಕಣ್ಮನ ಸೆಳೆಯಿತು. ಸ್ಪರ್ಧೆಯನ್ನು ಸಾರ್ವಜನಿಕರಿಗೆ ಮತ್ತು ಶಾಲೆಯ ಮಕ್ಕಳಿಗೆ ಹಿರಿಯ ಮತ್ತು ಕಿರಿಯ ಪ್ರತ್ಯೇಕ ಎರಡು ವಿಭಾಗದಲ್ಲಿ ನಡೆಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳ ಕಿರಿಯ ವಿಭಾಗದಲ್ಲಿ ನಿಶಾಂತ್ (ಪ್ರಥಮ), ಅಗಸ್ತ್ಯ (ದ್ವಿತೀಯ),ಮಹಾಲಕ್ಷ್ಮಿ (ತೃತೀಯ). ಹಿರಿಯ ವಿಭಾಗ ದಲ್ಲಿ ಐಶಾನಿ (ಪ್ರಥಮ), ಅರ್ನಿಕ (ದ್ವಿತೀಯ), ಅಹನ (ತೃತೀಯ).
ಶಾಂತಿನಿಕೇತನದ ಶಾಲೆಯ ಮಕ್ಕಳ ಕಿರಿಯ ವಿಭಾಗದಲ್ಲಿ ಅನಿಕೇತ್(ಪ್ರಥಮ), ವಾಸುದೇವ್ (ದ್ವಿತೀಯ), ಕರ್ನಿಕ ಮತ್ತು ಯಶ್ವಿ (ತೃತೀಯ), ಹಿರಿಯ ವಿಭಾಗದಲ್ಲಿ ಪಾರ್ವತಿ (ಪ್ರಥಮ), ಸ್ವರೂಪ್ ಮತ್ತು ಅರುಷಿ (ದ್ವಿತೀಯ) ರಿತ್ವಿಕ್ (ತೃತೀಯ) ಬಹುಮಾನ ಪಡೆದುಕೊಂಡರು.
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಂತಿನಿಕೇತನ ಸಂಸ್ಥೆಯ ನಿರ್ದೇಶಕ ಡಾ.ಸಂಜು. ಟಿ. ನಾಯಕ, ಸಂಸ್ಥೆಯ ಕಾರ್ಯದರ್ಶಿ ಶಾಂತಿ. ಬಿ. ನಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಶಿಕ್ಷಕರು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

