ಹೊನ್ನಾವರ : ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ವಿರುದ್ಧ ಅವಹೇಳನಕಾರಿಯಾಗಿ ಪೇಬ್ಸುಕ್ ಪೋಸ್ಟ್ ಮಾಡಿದ ಆರೋಪದಡಿ ರಾಘು ಮೇಸ್ತಾ (Raghu Mesta) ಅವರ ಮೇಲೆ ಪ್ರಕರಣ ದಾಖಲಾಗಿದೆ.

     ಹೊನ್ನಾವರ ಪೊಲೀಸ್ ಠಾಣೆಯ ಸೋಷಿಯಲ ಮೀಡಿಯಾ ಮಾನಿಟರಿಂಗ್ ಸೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಅನಿಲ ಆರ್. ಲಮಾಣಿ ಅವರು ರಾಘು ಮೇಸ್ತಾ ಅವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪಿಎಸೈ ಮಹಾಂತೇಶ ನಾಯಕ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

     ರಾಘು ಮೇಸ್ತಾ ಹೆಸರಿನಲ್ಲಿ ಇರುವ ಪೇಸ್ಬುಕ್ ಖಾತೆಯಿಂದ ಸರಿಯಾಗಿ ಉತ್ತರಿಸಿ ಬಹುಮಾನ ಗೆಲ್ಲಿ ಎಂದು ನಮೂದಿಸಿ ಜಿ. ಪರಮೇಶ್ವರ ಅವರ ಪೋಟೊ ಬಳಸಿಕೊಂಡು ಅಹಸ್ಯವಾಗಿ ಉತ್ತರವನ್ನು ಬರೆದು, ಅವಹೇಳನ ಮಾಡಿ ಆತ್ಮಸ್ಥೆöÊರ್ಯವನ್ನು ಕುಗ್ಗುವಂತೆ ಮಾಡಿ, ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡಲು ಪ್ರಯತ್ನಿಸಿದ್ದಾಗಿ ಪೊಲೀಸ್ ಸಿಬ್ಬಂದಿ ಅನಿಲ ಆರ್. ಲಮಾಣಿ ದೂರು ನೀಡಿದ್ದಾರೆ.

      ರಾಘು ಮೇಸ್ತಾ ಇದು ನಕಲಿ ಪೇಸ್ಬುಕ್ ಖಾತೆಯೆ ಅಥವಾ ಅಸಲಿಯೆ ಎಂದು ಪೊಲೀಸರು ತನಿಖೆ ನಡೆಸಿದ್ದಾರೆ. ಗೌರವಾನ್ವಿತ ಗೃಹ ಸಚಿವ ಡಾ. ಈ ಪರಮೇಶ್ವರ ಅವರ ವಿರುದ್ದ ಈ ರೀತಿ ಮಾನಹಾನಿಕಾರಕ ಪೋಸ್ಟ್ ಪ್ರಕಟಿಸಿದ ಆರೋಪಿಯನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸುವಂತೆ ಸಮಾನ ಮನಸ್ಕ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.