ಪ್ರತ್ಯಕ್ಷ ವರದಿ : ದಿನಕರ ನಾಯ್ಕ. ಅಲಗೇರಿ

ಅಂಕೋಲಾ : ಬಸ್ ನಿಲ್ದಾಣದ ಆವಾರದಲ್ಲಿದ್ದ ಮರಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದು 14 ಪ್ರಯಾಣಿಕರು ಗಾಯಗೊಂಡು ಘಟನೆ ಮಂಗಳವಾರ ನಡೆದಿದೆ,

ಕಾರವಾರದ ಸುಂಕೇರಿಯ ಉದಯ ಪಾಂಡುರ0ಗ ಅಂಕೋಲೆಕರ, ಅವರ್ಸಾದ ತಾರಿಬೊಳೆಯ ನಿವಾಸಿಗಳಾದ ಗಾಯತ್ರಿ ಮಾರುತಿ ಅಂಬಿಗ, ಮಾರುತಿ ಬಲಿಯಾ ಅಂಬಿಗ, ಕಾರವಾರದ ಸದಾಶಿವಗಡದ ಪಾರವ್ವ ಲೋಕೇಶ ಲಮಾಣಿ, ಕಾರವಾರದ ನಮನ ಗೋಪಾಲಕೃಷ್ಣ ನಾಯ್ಕ, ಬನವಾಸಿಯವರಾದ ಉಷಾ ಚನ್ನಬಸಪ್ಪ ಕರಡಿ, ರೇಣುಕಾ ಚನ್ನಬಸಪ್ಪ ಚೆನ್ನಯ್ಯಾ, ಶಿರಶಿಯ ಮುಸ್ಲಿಂ ಗಲ್ಲಿಯವರಾದ ಅಬ್ದುಲ ಅಜೀಬ ಖಾನ, ಮಸ್ಸೂರಾ ಸೈಯ್ಯದ, ಶಹನಾ ಅಬ್ದುಲ ಅಹೀಜ್, ಹಾನಗಲದ ಶಾಂತವ್ವ ಗುರವಪ್ಪ ಗೊಲ್ಲರ, ಶಿರಶಿಯ ದಾಸನಕೊಪ್ಪದ ಅಕ್ಕಮ್ಮಾ ತಿಮ್ಮಣ್ಣ ಗೊಲ್ಲರ, ಸಾರಿಗೆ ಬಸ್ ನಿರ್ವಾಹಕ ಡಿ. ತಿಮ್ಮಯ್ಯ ದಾಸಪ್ಪ ಗಾಯಗೊಂಡವರಾಗಿದ್ದಾರೆ.

ಅವರ್ಸಾದ ತಾರಿಬೊಳೆಯ ನಿವಾಸಿ ಗಾಯತ್ರಿ ಮಾರುತಿ ಅಂಬಿಗ, ಕಾರವಾರದ ಸದಾಶಿವಗಡದ ಪಾರವ್ವ ಲೋಕೇಶ ಲಮಾಣಿ, ಹಾನಗಲದ ಶಾಂತವ್ವ ಗುರವಪ್ಪ ಗೊಲ್ಲರ ಇವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗುತ್ತಿದೆ.

ನಡೆದದ್ದೇನು..?

ಕಾರವಾರದಿಂದ ಬೆಂಗಳೂರಿಗೆ ಸಾಗುವ ಬಸ್ ಇದಾಗಿದ್ದು, ಅಂಕೋಲಾ ನಿಲ್ದಾಣದಿಂದ ಬಸ್ ಸಾಗುವ ವೇಳೆ ಚಾಲಕ ಎಚ್.ಬಿ.ಸ್ವಾಮಿ ಹಿಂಬದಿಯ ಪ್ರಯಾಣಿಕರನ್ನು ನೋಡುತ್ತ ಬಸ್‌ನ್ನ ನಿರ್ಲಕ್ಷತದಿಂದ ಬಸ್ ಚಲಾಯಿಸಿದ್ದರಿಂದ ನಿಲ್ದಾಣದಲ್ಲಿರುವ ಸಾಗವಾನಿ ಮರಕ್ಕೆ ಬಸ್ ಗುದ್ದಿದೆ.

 ಕೂಡಲೆ ಗಾಯಾಳುಗಳನ್ನು ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಡಾ. ರಮೇಶ, ಡಾ. ಅನುಪಮಾ, ಡಾ. ರಾಜೇಶ ಅವರು ಚಿಕಿತ್ಸೆ ನೀಡಿದ್ದಾರೆ.

ಪೋಲಿಸ್ ಸಿಬ್ಬಂದಿಗಳಾದ ಸುಧಾಕರ ಎಮ್. ನಾಯ್ಕ ಬಾಬು ಕೇಣಿಕರ ಸ್ಥಳಾಕ್ಕಾಗಮಿಸಿ ಗಾಯಾಳುಗಳಿಂದ ಮಾಹಿತಿ ಪಡೆದಿದ್ದಾರೆ.

ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆಗೆ ಅಂಕೋಲಾ ಸಾರಿಗೆ ಡಿಪೋದ ವ್ಯವಸ್ಥಾಪಕಿಚೈತನ್ಯ ಅಗಳಗಳ್ಳಿ, ಎಟಿಎಸ್ ಶಿವಾನಂದ ನಾಯ್ಕ, ಟ್ರಾಫಿಕ್ ಕಂಟ್ರೋಲರ ಪ್ರಕಾಶ ನಾಯ್ಕ ಆಸ್ಪತ್ರಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ.