ವರದಿ : ಸುಜನ್ ರವಿ ನಾಯಕ.ಅಗಸೂರು
ಅಂಕೋಲಾ : ತಾಲೂಕಿನ ಅಗಸೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಊರಿನ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಸ್ವಚ್ಛ-ಸುಂದರಿ-ಶುಭ್ರ ಶಾಲೆಯ ಕನಸನ್ನು ಹೊತ್ತು ನಿಸ್ವಾರ್ಥ ಭಾವದಿಂದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಶಾಲೆಯ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದರು.
ಅನುಪಯುಕ್ತ ಅಥವಾ ಪರಿಸರಕ್ಕೆ ಹಾನಿಕಾರಕವಾದ ವಸ್ತುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡದ ಪ್ರಜ್ಞಾಹೀನ ವ್ಯಕ್ತಿಗಳಿಗೆ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶವನ್ನು ಹೊತ್ತು ಗ್ರಾಮಸ್ಥರಾದ ರವಿ ಜಿ. ನಾಯಕ, ಬಾಲಚಂದ್ರ ನಾಯಕ, ಸುರೇಶ್ ಗೌಡ, ತುಳಸು ಗೌಡ, ಮಧುಸೂದನ ನಾಯಕ, ಮಂಜುನಾಥ ಹರಿಕಂತ್, ಸುಜನ್ ನಾಯಕ, ಮಂಜುನಾಥ್ ಗೌಡ, ದಿನೇಶ್ ನಾಯ್ಕ, ಲೋಹಿತ್ ಗೌಡ, ಬೀರಾ ಗೌಡ, ಗಣಪತಿ ಗೌಡ ಉಲ್ಲಾಸ್ ನಾಯ್ಕ, ಗುರು ನಾಯ್ಕ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ವ್ಯಕ್ತಿಗಳು ಭಾಗಿಯಾಗಿದ್ದರು.
ಈ ಕಾರ್ಯಕ್ರಮವು ಒಂದೇ ದಿನಕ್ಕೆ ಸೀಮಿತವಾಗದೇ, ಮುಂದಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸ್ವಚ್ಛ ಗ್ರಾಮ ಅರಿವು ಮೂಡಿಸುವ ಹಂಬಲವನ್ನು ಹೊಂದಿದ್ದೇವೆ ಎನ್ನುವ ಸ್ಪೂರ್ತಿದಾಯಕ ಅಭಿಪ್ರಾಯವನ್ನು ಹಂಚಿಕೊಂಡರು.
