ವರದಿ : ಮಂಜುನಾಥ ವಿ. ನಾಯ್ಕ.
ಅಂಕೋಲಾ : ನಗರದ ಪುರಲಕ್ಕಿಬೇಣ ಹಾಗೂ ಕೆಪಿಟಿಸಿಎಲ್ ಎದುರ ರಸ್ತೆಯ ಶ್ರಮದಾನವು ರವಿವಾರದಂದು ಅರ್ಥಪೂರ್ಣವಾಗಿ ನಡೆಯಿತು.
ಗುರುಕೃಪಾ ಸೇವಾ ಸಮಿತಿ ಪುರಲಕ್ಕಿಬೇಣ ಹಾಗೂ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಂಕೋಲಾ ಇವರಿಂದ ರವಿವಾರ ಮುಂಜಾನೆ ಪುರಲಕ್ಕಿಬೇಣ ಹಾಗೂ ಕೆಪಿಟಿಸಿಎಲ್ ಎದುರು ರಸ್ತೆ ಹಾಗೂ ರಸ್ತೆ ಪಕ್ಕದಲಿನ ಗಿಡಗಂಟೆಗಳನ್ನು ಸ್ವಚಗೊಳಿಸಿ ಶ್ರಮದಾನವನ್ನು ಮಾಡಿದರು.
ಪ್ರತಿ ರವಿವಾರ ದಂದು ನಡೆಯುವ ಶ್ರಮದಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಾರ್ಡ್ ನಂ 18 ರ ಸದಸ್ಯರ ಮಂಗೇಶ ಆಗೇರ, ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು ಎಮ್.ಆರ್ ಸ್ವಾಮಿ ಪಾಲ್ಗೊಂಡಿದರು.
