ಅಂಕೋಲಾ : ಹಟ್ಟಿಕೇರಿಯ ಫಾರೆಸ್ಟ್ ಡಿಪೋ ಎದುರಿನ ರಾಷ್ಟಿçÃಯ ಹೆದ್ದಾರಿಯ ಚರಂಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಗೋವಾ ಸರಾಯಿಯನ್ನು ಅಂಕೋಲಾ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.

 ಪಿಎಸೈ ಸುಹಾನ್ ಆರ್ ನೇತ್ರತ್ವದ ತಂಡ ಸೋಮವಾರ ಬೆಳಗಿನ ಜಾವ 4-05 ರ ವೇಳೆಗೆ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ 76150 ಮೌಲ್ಯದ 350 ಗೋವಾದ ಮದ್ಯದ ಬಾಟಲುಗಳು ಚರಂಡಿಯಲ್ಲಿ ಇರುವದು ಪತ್ತೆಯಾಗಿದೆ.

 ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.