ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ಎಲ್ಲಡೆ ಗಣೇಶ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ಮಟ್ಕಾ ಹಬ್ಬದ ಅಶುಭಾರಂಭವು ಗುರುವಾರದಿಂದ ತಾಲೂಕಿನಲ್ಲಿ ಖುಲಂ ಖುಲ್ಲಾ ಆಗಿ ತೆರೆದುಕೊಂಡಿದ್ದು, ಪೊಲೀಸ್ ಇಲಾಖೆ ಜಾಣ ಕುರುಡು ವಹಿಸಿರುವದು ಹಲವು ಅನುಮಾನಗಳಿಗೆ ಕಾರಣವಾಗಿದೆ.

        ಸಿಪಿಐ ಸಂತೋಷ ಶೆಟ್ಟಿ ಎಂದರೆ ಅದೊಂದು ಸಂಬಾವಿತ ವ್ಯಕ್ತಿತ್ವ ಎಂಬದು ಅಂಕೋಲಿಗರಲ್ಲಿದೆ. ಆದರೆ ಇದೇ ಇದೆ ಪೊಲೀಸ್ ಇಲಾಖೆಯ ಹೆಸರು ಬಳಸಿಕೊಂಡು ಬಿಂದಾಸ್ ಆಗಿ ಮಟ್ಕಾ ದಂಧೆ ಪ್ರಾರಂಭಗೊAಡಿರುವದು ಸಭ್ಯರಿಗೆ ಅಂಟಿದ ಕೊಳೆಯೆಂದೆ ಭಾವಿಸುವಂತಾಗಿದೆ. ಇಷ್ಟು ದಿನ ಮಟ್ಕಾ ದಂಧೆ ಎನ್ನುವದು ಕದ್ದು ಮುಚ್ಚಿ ಎನ್ನುವಂತಾಗಿತ್ತು. ಬೆಳಂಬಾರದ ಬುಕ್ಕಿಯೊರ್ವನ ಸಾರಥ್ಯದಲ್ಲಿ ಮಟ್ಕಾ ದಂದೆ ಬಿಚ್ಚಿಕೊಂಡಿರುವದು ಈಗ ಜಗಜ್ಜಾಹೀರ ಆಗಿದೆ.

        ಸಿಪಿಐ ಸಂತೋಷ ಶೆಟ್ಟಿ ಎಂದೂ ಸಹ ತನ್ನ ಕೈ ಕೊಳಕು ಮಾಡಿಕೊಂಡವರಲ್ಲ. ಪೊಲೀಸ್ ಇಲಾಖೆ ಎಂದರೆ ಅದರದೆ ಆದ ವ್ಯವಸ್ಥೆ ಇರುತ್ತದೆ. ಅದರಲ್ಲಿಯೆ ತೃಪ್ತಿ ಪಟ್ಟು, ಯಾರಿಗೂ ತೊಂದರೆ ದಂಡ ನಾಯಕನಾಗಿ ಹುಟ್ಟೂರು ಮಂಗಳೂರಿನ ಘನತೆಗೆ ಚ್ಯುತಿ ಬಾರದಂತೆ ನಡುವಳಿಕೆ ತೋರಿದವರು.

        ಆದರೆ ಅಂಕೋಲಾದಲ್ಲಿ ಬಿಂದಾಸ್ ಆಗಿ ತೆರೆದುಕೊಂಡ ಮಟ್ಕಾ ದಂಧೆಯಿ0ದಾಗಿ ಪೊಲೀಸ್ ಇಲಾಖೆಯ ಮೌನದ ಕ್ರಮ ಬೀದಿ ಜನರ ಬಾಯಿಗೆ ಆಹಾರವಾದಂತಾಗಿದೆ. ಮಟ್ಕಾ ದಂದೆ ಬಿಟ್ಟು ನಿಷ್ಠಾವಂತರಾಗಿ ದುಡಿಯುತ್ತಿರುವ ಕೆಲವರನ್ನು ಸಹ ಈ ಮಟ್ಕಾ ದಂಧೆ ಈ ಕರಾಳ ಬದುಕಿಗೆ ತಳ್ಳುತ್ತಿರುವದು ಸಹ ವ್ಯವಸ್ಥೆಗೆ ಹಿಡಿದ ಗ್ರಹಣವಾಗಿದೆ.

        ಮಟ್ಕಾ ದಂದೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆಯ ಹಾದಿಯ ಸುದ್ದಿಯು ಕೇಳಿ ಬಂದಿದೆ.

        ನಿವೃತ್ತ ಸೈನಿಕನೊರ್ವ ಮಂಜುನಾಥೇಶ್ವರ ಸನ್ನಿಧಿಯಿಂದ, ಮಟ್ಕಾ ದಂಧೆ ಇಳಿದಿರುವ ಸಂಗತಿ ಕೂಡ ಈಗ ಗುಟ್ಟಾಗಿ ಉಳಿದಿಲ್ಲ. ಮಟ್ಕಾ ದಾರಿಯ ಹಾದಿಯಲ್ಲಿ ಭಾಗ-೨ ರಲ್ಲಿ ನಿವೃತ್ತ ಸೈನಿನೊರ್ವ ಎಲ್ಲ ಬಿಟ್ಟ ಬಂಗಿ ನೆಟ್ಟ ಕಹಾನಿ ತೆರದುಕೊಳ್ಳಲಿದೆ.