ಅಂಕೋಲಾ : ಸಾರಿಗೆ ಬಸ್‌ನಲ್ಲಿ ಕಳೆದುಕೊಂಡಿದ್ದ ಮಾಂಗಲ್ಯ ಸರವನ್ನು ಮರಳಿ ಅದರ ವಾರಸುದಾರರಿಗೆ ಹಿಂದಿರುಗಿಸಿ ಅಂಕೋಲಾ ಬಸ್ ಡಿಪೋದ ನಿರ್ವಾಹಕ ಎ.ಎ.ಮುಜಾವರ ಮಾದರಿಯಾಗಿದ್ದಾರೆ.

        ಅಂಕೋಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿರುವ ಬಬೀತಾ ತಳೇಕರ ಅವರು ಕರ್ತವ್ಯಕ್ಕೆ ಬರಲು ಕಾರವಾರ- ಅಥಣಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಬಸ್‌ನಲ್ಲಿ ಮಾಂಗಲ್ಯ ಸರ್ ತುಂಡಾಗಿ ಬಿದ್ದು, ಬಸ್‌ನ ಸೀಟ್‌ನ ಅಂಚಿನೊಳಗೆ ಸೇರಿಕೊಂಡಿತ್ತು. ಇದನ್ನು ಬಬಿತಾ ತಳೇಕರ ಅವರು ಗಮನಿಸಿದೆ ಆಸ್ಪತ್ರೆಗೆ ಕರ್ತವ್ಯಕ್ಕೆ ಸಾಗಿದ್ದರು.

        ಸೀಟ್ ಅಂಚಿನೊಳಗೆ ಹೊಳೆಯುತ್ತಿದ್ದ ಚಿನ್ನದ ಸರವನ್ನು ನಿರ್ವಾಹಕ .. ಮುಜಾವರ ಗಮನಿಸಿದ್ದಾರೆ. ಮಾಂಗಲ್ಯ ಸರವನ್ನು ಮರಳಿ ಬಬೀತಾ ತಳೇಕರ ಅವರಿಗೆ ನೀಡಿ ಪ್ರಾಮಾಣಿಕತೆಯ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

        ನಿರ್ವಾಹಕ ಎ.ಎ. ಮುಜಾವರ ಅವರ ಮಾದರಿ ಕೈಂಕರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.