ರಾಘು ಕಾಕರಮಠ.

ಅಂಕೋಲಾ : ಮದುವೆಯಾದ 6 ತಿಂಗಳಲ್ಲೆ, ಪತ್ನಿಯನ್ನು ಬಿಟ್ಟು ಮನೆಯಿಂದ ನಾಪತ್ತೆಯಾಗಿದ್ದ ಶಿಕ್ಷಕ ವೃತ್ತಿಯಲ್ಲಿರುವ ಪತಿ ಮಹಾಶಯನೊರ್ವ ಅಂಕೋಲಾದಲ್ಲಿ ಇನೊರ್ವಳೊಂದಿಗೆ ವಿವಾಹವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

 ಹೌದು.. ಇದು ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ. ಹಳಿಯಾಳದಲ್ಲಿ ಪ್ರೀತಿಸಿ ಮದುವೆಯಾದ ಆರೆ ತಿಂಗಳಲ್ಲೆ ದುಬೈಗೆ ಹೋಗಿ ಬರುತ್ತೇನೆಂದು ಹೇಳಿ ನಾಪತ್ತೆ ಈ ಭೂಪ ಮತ್ತೆ 3 ವರ್ಷದ ನಂತರ ಪತ್ತೆಯಾಗಿದ್ದು ಮಾತ್ರ ಅಂಕೋಲಾದಲ್ಲಿ.

 ಪ್ರೀತಿ-ಪ್ರೇಮ-ಪ್ರಣಯ:

ಈ ಶಿಕ್ಷಕ ಹಳಿಯಾಳದಲ್ಲಿ ರೇಷ್ಮಾ (ಹೆಸರು ಬದಲಾಯಿಸಲಾಗಿದೆ) ಪ್ರೇಮಾಂಕುರಕ್ಕೆ ಒಳಗಾಗಿದ್ದ. ಹಾಗೆ ಮದುವೆಯು ಆಗಿ 6 ತಿಂಗಳ ಕಾಲ ಪತ್ನಿಯೊಂದಿಗೆ ಚೆನ್ನಾಗಿಯೂ ಇದ್ದ. ನಾನು ದುಬೈಗೆ ಹೋಗಿ ಹಣ ಸಂಪಾದನೆ ಮಾಡಿಕೊಂಡು ಬರುತ್ತೇನೆಂದು ಎಂದು ಹೇಳಿ ಹೋದವನು 5 ವರ್ಷ್ ಕಳೆದರೂ ಪತ್ತೆಯಾಗಿರಲಿಲ್ಲ.

 ಪತ್ನಿ ರೇಷ್ಮಾ ಪತಿಯ ಆಗಮನಕ್ಕಾಗಿ ಆಕಾಶದೆತ್ತರಕ್ಕೆ ನೋಡುತ್ತ ವಿಮಾನದತ್ತ ನೋಡುತ್ತಲೆ ಇದ್ದಳು. ಆದರೆ ಪತಿ 3 ವರ್ಷ ಕಳೆದರೂ ಸಹ ಬಂದಿರಲ್ಲ. ದುಬೈ ಹೋಗಿ ಮುಟ್ಟಿದ್ದೇನೆ ಎಂದು ಒಂದು ಭಾರಿ ಪೋನ್ ಮಾಡಿದ್ದು ಬಿಟ್ಟರೆ, ನಂತರ ಮೋಬೈಲ್ ಮಾತ್ರ ಸ್ವೀಚ್ಡ್ ಆಫ್ ಆಗಿತ್ತು.

 ಏನು ಮಾಡಬೇಕೆಂದು ತೋಚದಿದ್ದ ರೇಷ್ಮಾ ಪತಿ ಬಂದೆ ಬರುತ್ತಾನೆ ಎಂದು ಕಾದು ಕುಳಿತಿದ್ದಳು. ಆದರೆ ಒಂದು ದಿನ ಈತನನ್ನು ಅಂಕೋಲಾದ ಬಸ್ ನಿಲ್ದಾಣದಲ್ಲಿ ಕಂಡಿದ್ದೇನೆ ಎಂದು ಪತ್ನಿ ರೇಷ್ಮಾಳಿಗೆ ಅವರ ಸಂಬAದಿಕರು ವಿಷಯ ಮುಟ್ಟಿಸಿದ್ದರು.

 ಪತಿ ಪೋಟೊ ಹಿಡಿದು ಅಂಕೋಲಾಕ್ಕೆ ಬಂದು ವಿಚಾರಿಸಿದಾಗ ಈತ ಅಂಕೋಲಾದ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ ವಿಷಯ ತಿಳಿದು ಬಂದಿದೆ. ಅಷ್ಟೆ ಅಲ್ಲದೆ ಇಲ್ಲೊಂದು ಮದುವೆಯಾಗಿ ಒಂದು ಮಗುವಿನ ತಂದೆಯಾಗಿರುವ ವಿಷಯದ ಗುಟ್ಟು ಕೂಡ ರಟ್ಟಾಗಿದೆ.

 ಈ ಬಗ್ಗೆ ಹಳಿಯಾಳದಲ್ಲಿ (ಸಿವಿಲ್) ಖಾಸಗಿ ದೂರು ದಾಖಲಾಗಿದೆ. ಪತ್ನಿ ಮಾಡಿರುವ ಮೋಸದಿಂದ ಕಂಗೆಟ್ಟ ರೇಷ್ಮಾ ಮಾತ್ರ ಕಂಗಾಲಾಗಿದ್ದಾಳೆ. ಪತಿ ಮಾತ್ರ ಅಂಕೋಲಾದ ಶಾಲೆಯೊಂದರಲ್ಲಿ ಬಿಂದಾಸ್ ಆಗಿ ಪಾಠ ಮಾಡುತ್ತ ಎರಡನೆ ಪತ್ನಿಯೊಂದಿಗೆ ತನ್ನ ಬದುಕನ್ನು ಕಟ್ಟಿಕೊಂಡಿದ್ದಾನೆ.