ಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಗ್ಯಾಂಗ್ ಅಂಕೋಲಾದಲ್ಲಿ ಸಕ್ರೀಯ

ಒಂದೇ ತಿಂಗಳಲ್ಲಿ ಮೂರು ಪ್ರಕರಣಗಳು ದಾಖಲು : ಪ್ರಯಾಣಿಕರಲ್ಲಿ ಆತಂಕ ತಂದ ಕಳ್ಳತನ ಪ್ರಕರಣ

ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ತಾಲೂಕಿನ ಸರಹದ್ದಿನ ವ್ಯಾಪ್ತಿಯಲ್ಲಿ ರೇಲ್ವೆ ಪ್ರಯಾಣಿಕರ ವಸ್ತುಗಳನ್ನು ದೋಚುವ ವ್ಯವಸ್ಥಿತ ಗ್ಯಾಂಗ್‌ನಿAದಾಗಿ ರೇಲ್ವೆ ಪ್ರಯಾಣಿಕರಲ್ಲಿ ಆತಂಕವನ್ನು ಉಂಟು ಮಾಡಿದೆ.

     ಒಂದೆ ತಿಂಗಳಲ್ಲಿ ಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸಿರುವ ಮೂರು ಪ್ರಕರಣಗಳು ಅಂಕೋಲಾ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳು ಮಾತ್ರ ಪೊಲೀಸರಿಗೆ ಸಿಗದೇ ತಮ್ಮ ಕಳ್ಳತನ ಕರಾಮತ್ತು ಮುಂದುವರೆಸಿದ್ದಾರೆ.

ನಡೆದದ್ದೇನು..?

ಗುಜರಾತನ ಅಹಮಾಬಾದದಿಂದ ಕೇರಳಕ್ಕೆ ಮನೋಜ ನಾಯರ ಎನ್ನುವವರ ಪೋರಬಂದರ ಎಕ್ಸಪ್ರೇಸ್ ರೇಲ್ವೆಯ ಸ್ಲೋಪರ್ ಕೋಚಲ್ಲಿ ಪ್ರಯಾಣ ಬೆಳೆಸಿದ್ದರು. ಗುರುವಾರ ಬೆಳಗಿನ ಜಾವ 1 ಗಂಟೆಯ ಅವಧಿಯಲ್ಲಿ ರೇಲ್ವೆ ಅಂಕೋಲಾದಿAದ ಗೋಕರ್ಣದತ್ತ ಸಾಗುತ್ತಿರುವಾಗ ಕಳ್ಳರು ವ್ಯಾನಿಟಿ ಬ್ಯಾಗನಲ್ಲಿಟ್ಟಿದ್ದ ಮೋಬೈಲ, ೨ ಸಾವಿರ ಹಣ, ಎಟಿಎಮ್ ಕಾರ್ಡ, 1೦ ಲಕ್ಷ ರೂಪಾಯಿಯ ಡಿಡಿ, ಮನೆಯ ಕಾಗದ ಪತ್ರವನ್ನು ಕದ್ದು ಪರಾರಿಯಾಗಿದ್ದಾರೆ.

     ಈ ಬಗ್ಗೆ ದೂರನ್ನು ಮನೋಜ ನಾಯರ ಅವರು ಕಾರವಾರದ ರೇಲ್ವೆ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು. ಕಾರವಾರದ ರೇಲ್ವೆ ಪೊಲೀಸರು ಪ್ರಕರಣವನ್ನು ಅಂಕೋಲಾ ಪೊಲೀಸರಿಗೆ ಹಸ್ತಾಂತರಿಸಿ ಕಾನೂನು ಕ್ರಮ ಜರುಗಿದ್ದಾರೆ.

ಪಿಎಸೈ ಸುಹಾಸ ಆರ್. ಅವರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತಗೆ ಮುಂದಾಗಿದ್ದಾರೆ. ರೇಲ್ವೆ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಪ್ರಕರಣದಿಂದಾಗಿ ಕೊಂಕಣ ರೇಲ್ವೆ ಎಂದರೆ ಭಯ ಪಡುವ ಸ್ಥಿತಿ ಪ್ರಯಾಣಿಕರದ್ದಾಗಿದೆ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನು ಪತ್ತೆ ಮಾಡಿ ಪ್ರಯಾಣಿಕರ ನೆಮ್ಮದಿಗೆ ಕಾರನರಾಗಬೇಕಿದೆ ಎಂಬ ಆಗ್ರಹ ಕೂಗು ಬಲವಾಗಿ ಕೇಳಿ ಬಂದಿದೆ.