ಕಾರವಾರದಲ್ಲಿ ನಡೆದ ಭೈಕ್  ಅಪಘಾತದಲ್ಲಿ ಅಂಕೋಲಾದ ಯುವಕ ಸಾವು

ಅಂಕೋಲಾ : ಕಾರವಾರದ ಬಿಣಗಾ ಘಟ್ಟದ ಬಳಿ ನಡೆದ ಬೈಕ್ ಅಪಘಾತದಲ್ಲಿ ಅಂಕೋಲಾ ತಾಲೂಕಿನ ಶಿರಗುಂಜಿಯ ಯುವಕ ಜಿತೇಂದ್ರ (ಕಿರಣ) ಅನಂತ ಗೌಡ (23) ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

 ಕ್ರೀಯಾಶೀಲ ಯುವಕನಾಗಿದ್ದ ಜಿತೇಂದ್ರ ಅನಂತ ಗೌಡ ಅರ್ಗಾದ ಸೀಬರ್ಡ ನೌಕಾನೆಲೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ. ಇತ್ತೀಚಿಗಷ್ಟೇ ಹೊಸ ಕೆಟಿಎಮ್ ಭೈಕ್ ಖರೀದಿಸಿದ್ದ. ಇದನ್ನು ಚಲಾಯಿಸಿಕೊಂಡು ಅಂಕೋಲಾದಿ0ದ ಕಾರವಾರಕ್ಕೆ ತೆರಳುತ್ತಿದಾಗ ಬಿಣಗಾ ಘಟ್ಟದ ಬಳಿ ಖಾಸಗಿ ಬಸ್‌ಗೆ ಇತನ ಬೈಕ್‌ಗೆ ಅಫಘಾತ ಪಡಿಸಿದ ಪರಿಣಾಮ, ಬಸ್‌ನ ಚಕ್ರಕ್ಕೆ ಸಿಲುಕಿ ಜಿತೇಂದ್ರ ಗೌಡ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.

 ಜಿತೇಂದ್ರ ಗೌಡ ಬಿಣಗಾ ಘಟ್ಟದ ಬಳಿ ಎದುರಿಗಿದ್ದ ಟೂರಿಸ್ಟ್ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾನೆ. ಈ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿ ಎದುರಾಗಿದೆ. ನಿಯಂತ್ರಣ ತಪ್ಪಿದ ಬೈಕ್ ಸವಾರ ಕಿರಣ ರಸ್ತೆಯಲ್ಲೆ ಬಿದ್ದಿದ್ದಾನೆ. ಹಿಂಬದಿಯಲ್ಲಿ ಇದ್ದ ಖಾಸಗಿ ಬಸ್ ಇತನ ಮೇಲೆ ಹರಿದಿದ್ದರಿಂದ ಸ್ಥಳದಲ್ಲಿಯೆ ಸಾವು ಕಂಡಿದ್ದಾನೆ.

 ಘಟನಾ ಸ್ಥಳಕ್ಕೆ ಕಾರವಾರದ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ಜಿತೇಂದ್ರ ಗೌಡ ಅವರು ತಂದೆ ಅನಂತ ತಾಯಿ ಶಿವಮ್ಮಾ ಗೌಡ, ಓರ್ವ ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾನೆ.

 ಕ್ರೀಯಾಶೀಲ ತರುಣನಾಗಿದ್ದ ಕಿರಣ ಗೌಡ ನಿಧನಕ್ಕೆ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ. ಹುಂಡಿಮನೆ ಅಡ್ಲೂರು, ಅನ್ನಪೂರ್ಣ ಸೌಹಾರ್ದದ ಅಧ್ಯಕ್ಷ ಮಂಜುನಾಥ ನಾಯಕ. ಅಡ್ಲೂರು, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರಂಜನ ನಾಯಕ. ಹಿಚ್ಕಡ, ಅಂಕೋಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಕಾರ್ಯದರ್ಶಿ ವಿಧ್ಯಾಧರ ಮೊರಭಾ, ಗೌರವಾಧ್ಯಕ್ಷ ರಾಘು ಕಾಕರಮಠ, ಪತ್ರಕರ್ತರಾದ ಸುಭಾಷ ಕಾರೇಬೈಲ, ದಿನಕರ ನಾಯ್ಕ ಅಲಗೇರಿ, ಪುರಸಭೆಯ ಸದಸ್ಯ ಪ್ರಕಾಶ ಗೌಡ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.