ಅಂಕೋಲಾ : ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದಾಗ ಅಂಕೋಲಾ ಪೊಲೀಸರು ದಾಳಿ ನಡೆಸಿ 8 ಜನರನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹೆಗ್ಗರಣಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಅಂಕೋಲಾ ಠಾಣೆಯ ಪಿಎಸೈ ಉದ್ದಪ್ಪ ಧರೆಪ್ಪನವರ ನೇತ್ರತ್ಬದಲ್ಲಿ ದಾಳಿ ನಡೆಸಿ ಅರಣ್ಯ ಪ್ರದೇಶದಲ್ಲಿ ಕೋಳಿ ಕಾದಾಟ ನಡೆಸಿ, ಅದರ ಮೇಲೆ ಹಣ ಕಟ್ಟಿ ಜೂಜಾಟ ನಡೆಸಿದ್ದ ಆರೋಪಿಗಳನ್ನು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ 8 ಜನರನ್ನು ಹಾಗೂ ಕೋಳಿ ಮತ್ತು ನಗದು ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಿಸುವ ಅನುಮತಿಗಾಗಿ  ಅಂಕೋಲಾ ನ್ಯಾಯಾಲಯಕ್ಕೆ ಪೊಲೀಸರು ವರದಿ ನೀಡಿದ್ದಾರೆ. 

ಪಿಎಸೈ ಉದ್ದಪ್ಪ ಧರೆಪ್ಪನವರ ನೇತ್ರತ್ಬದಲ್ಲಿ ನಡೆದ ದಾಳಿಯಲ್ಲಿ ಗುಪ್ತದಳದ ಸಿಬ್ಬಂದಿ ರೋಹಿದಾಸ ನಾಯ್ಕ,ಚಾಲಕ ಜಗಧೀಶ ನಾಯ್ಕ, ಸಿಬ್ಬಂದಿಗಳಾದ ಮಜೋಜ್, ಪ್ರೇಮಾನಂದ ನಾಯ್ಕ ಸೇರಿದಂತೆ ಇನ್ನಿತರರು ದಾಳಿಯಲ್ಲಿದ್ದರು.

ಆರೋಪಿಗಳ ಮಾಹಿತಿ ಪೊಲೀಸರಿಂದ ತಿಳಿದುಬರಬೇಕಾಗಿದ್ದು, ಎಫ್.ಐ.ಆರ್. ದಾಖಲಾಖಲಾದ ಮೇಲೆ ಸಂಪೂರ್ಣ ವಿವರ ತಿಳಿದುಬರಬೇಕಿದೆ.