ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ನಾನು ಯಾರ ಮೈಮುಟ್ಟಿಯು ಮಜಾ ತೆಗೆದುಕೊಳ್ಳಲು ಯತ್ನಿಸಿಲ್ಲ. ನನ್ನ ಮತ್ತು ಅವರ ನಡುವೆ ಹಣದ ವ್ಯವಹಾರವಿತ್ತು. ನಾನು ಹಣ ಕೇಳಲು ಹೋದಾಗ ಈ ಪತಿ-ಪತ್ನಿ ಸೇರಿ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸುಳ್ಳು ರಾದ್ದಾಂತ ಸೃಷ್ಟಿಸಿ ನನ್ನನ್ನು ಥಳಿಸಿದ್ದಾರೆ ಎಂದು ಕುಟುಕುಟಿ ಪುಟ್ಟು ಸ್ಪಷ್ಠಪಡಿಸಿದ್ದಾರೆ.
ಕಾರವಾರ ಟೈಮ್ಸ್ ನಲ್ಲಿ ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಮಟ್ಕಾ ಬುಕ್ಕಿಗೆ ಬಿತ್ತು ಧರ್ಮದೇಟು ಎಂದು ವರದಿಯಾಗಿರುತ್ತದೆ. ಸದರಿ ವರದಿಯಿಂದ ನನಗೆ ತೀವ್ರ ನೋವಾಗಿದೆ.
ನನಗೆ ಈ ಪತಿ-ಪತ್ನಿ ಸೇರಿ 7 ದಿನದ ವ್ಯಹಹಾರದ 37530 ರೂಪಾಯಿ ಕೊಡುವದು ಇರುತ್ತದೆ. ನಾನು ಈ ಹಣವನ್ನು ತೆಗೆದುಕೊಳ್ಳಲು ಅವರ ಮನೆಯ ಬಳಿ ತೆರಳಿದ್ದೆ. ಆಗ ಅವರ ಮನೆಯಲ್ಲಿ ಅವರ ಪತಿ ಇರಲಿಲ್ಲ. ನಾನು ಸಹಜವಾಗಿ ಅವರ ಮನೆಯೊಳಗೆ ಹೋಗಿದ್ದೆ. ಆಗ ಏಕಾಏಕಿ ಬೊಬ್ಬೆ ಹಾಕಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಸಿನಿಮಾ ಶೈಲಿಯಲ್ಲಿ ನನ್ನ ಮೇಲೆ ಎರಗಿ ಬಂದು ಹಲ್ಲೆ ನಡೆಸಲಾಯಿತು.
ನನಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ ವಿಡಿಯೋವನ್ನು ಮಾತ್ರ ಚಿತ್ರಿಕರಿಸಿಕೊಂಡಿದ್ದಾರೆ. ಇದು ಪೂರ್ವ ನಿಯೋಜಿತವಾಗಿದೆ. ನಾನು ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಇದ್ದರೆ ದಾಖಲೆ ತೋರಿಸಲಿ. ಕೇವಲ ವಿಡಿಯೋದಲ್ಲಿ ನನ್ನ ಮೇಲೆ ಕೈ ಹಾಕಿತ್ತೀಯಾ ಮಗನೆ ಎಂದು ನನ್ನನ್ನು ಎಳೆದಾಡುತ್ತಿರುವ ವಿಡಿಯೋ ಮಾತ್ರ ವಿಡಿಯೋದಲ್ಲಿದೆ. ನಾನು ಹೆಣ್ಣಿನ ಮೇಲೆ ಅಪಾರ ಗೌರವ ಉಳ್ಳವನು, ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಮಟ್ಕಾ ಬುಕ್ಕಿ ಕುಟುಕುಟಿ ಪುಟ್ಟು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣ ಏನಾಗಿತ್ತು..?
ಮಟ್ಕಾ ಚೀಟಿ ಬರೆದುಕೊಳ್ಳುವ ಮನೆಯಲ್ಲಿ ಯಾರಿಲ್ಲದ ವೇಳೆಯಲ್ಲಿ ಒಳನುಗ್ಗಿ ಆತನ ಹೆಂಡತಿಯ ಮೈಮುಟ್ಟಿ ಮಜಾ ತೆಗೆದುಕೊಳ್ಳಲು ಯತ್ನಿಸಿದ ಆರೋಪದ ಮೇಲೆ ಮಟ್ಕಾ ಬುಕ್ಕಿಗೆ ಧರ್ಮದೇಟು ನೀಡಲಾಗಿತ್ತು.
