ಅವರ್ಸಾ, ಸಕಲಬೇಣ ಮತ್ತು ಹಾರವಾಡದಲ್ಲಿ ಬಿಂದಾಸ್ ಆಗಿ ತೆರೆದುಕೊಂಡ ಮಟ್ಕಾ ದಂದೆ.
ಗ್ರಾಪ0 ಪ್ರತಿನಿಧಿಗಳ ಸಾರಥ್ಯದಲ್ಲಿ ತೆರದುಕೊಂಡ ಮಟ್ಕಾಕ್ಕೆ ನಾಗರಿಕರಿಂದ ಅಸಮಾಧಾನ
ವರದಿ : ಮುಕುಂದ ನಾಯ್ಕ.
ಅಂಕೋಲಾ : ತಾಲೂಕಿನ ಅವರ್ಸಾ, ಸಕಲಬೇಣ ಮತ್ತು ಹಾರವಾಡದಲ್ಲಿ ಮಟ್ಕಾದ ದರ್ಭಾರ ಮೀತಿ ಮೀರಿದೆ. ಅಂಕೋಲಾ ಪೊಲೀಸರು ತನ್ನ ಕಿಸೆಯಲ್ಲೆ ಇದ್ದಾರೆ ಎಂದು ಹೇಳಿಕೊಳ್ಳುತ್ತ ಮಟ್ಕಾ ದಂದೆಯನ್ನು ಇಲ್ಲಿ ಬಿಂದಾಸ್ ಆಗಿ ಪ್ರಾರಂಭಿಸಿರುವದು ವ್ಯವಸ್ಥೆಗೆ ಹಿಡಿದ ಗ್ರಹಣವೆಂದೆ ಭಾವಿಸುವಂತಾಗಿದೆ.
ಎಲ್ಲ ಬಿಟ್ಟು ಬಂಗಿ ನೆಟ್ಟ ಜನಪ್ರತಿನಿಧಿಗಳು ;
ಈ ಭಾಗದ ಕೆಲವು ಜನಪ್ರತಿನಿಧಿಗಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಸಂಪಾದಿಸಿಕೊAಡವರಾಗಿದ್ದಾರೆ. ಆದರೆ ಮಟ್ಕಾದ ರುಚಿ ಇವರ ಹಲ್ಲಿಗೆ ತಾಗಿದಂತೆ ತಾವು ಕೂಡ ಮಟ್ಕಾ ಬುಕ್ಕಿಗಳಾಗಿ ನಿಂತು ಕಿಂಗ್ ಮೇಕರ್ ಆಗಲು ಹವಣಿಸುತ್ತಿರುವ ಸಂಗತಿ ಕೂಡ ಗುಟ್ಟಾಗಿ ಉಳಿದಿಲ್ಲ.
ಎಲ್ಲ ಬಿಟ್ಟು ಬಂಗಿ ನೆಟ್ಟ ಎಂಬ ಗಾದೆಯಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸುಪರ್ಧಿಯ ಗ್ರಾಪಂ ಪ್ರತಿನಿಧಿಗಳೆ ಮಟ್ಕಾ ವ್ಯವಹಾರಕ್ಕೆ ನಿಂತಿರುವದು ಮತದಾರರನ್ನೆ ಕಸಿವಿಸಿ ಉಂಟು ಮಾಡುವಂತೆ ಮಾಡಿದೆ. ಇವರ ಅಸಲಿ ಮುಖ ಬಯಲಾಗುತ್ತಿದ್ದು ಮುಂದಿನ ದಿನಗಳಲ್ಲಿ ನಾಗರಿಕರೆ ತಕ್ಕ ಪಾಠ ಕಲಿಸಲು ಮೂಖರಾಗಿ ಎಲ್ಲ ವಿದ್ಯಮಾನಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದಾರೆ.
ಬದುಕು ಬರಡಾಗಿಸುತ್ತಿರುವ ಮಟ್ಕಾ :
ಅವರ್ಸಾ, ಸಕಲಬೇಣ ಮತ್ತು ಹಾರವಾಡದಲ್ಲಿ ಮಟ್ಕಾ ಬುಕ್ಕಿಗಳಾಗಲು ಅವರಲ್ಲಿಯೆ ಸ್ಪರ್ಧೆಗಳಿಗೆ. ತಾನು ಸಚಿವರಿಗೆ ಆಪ್ತ ಎಂದು ಹೇಳಿಕೊಳ್ಳುತ್ತಾ ಪೊಲೀಸರನ್ನು ಕೂಡ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ ತಮ್ಮ ಅಂದಾ ದರ್ಬಾರ ಮುಂದುವರೆಸಿರುವದು ಆರಕ್ಷಕರರಿಗೂ ನುಂಗಲಾರದ ತುಪ್ಪದಂತಾಗಿದೆ.
ಈ ಎಲ್ಲಾ ಎಳೆವಣಿಗೆಯ ನಡುವೆ ಬಡ ಜನರ ಬದುಕು ಮಾತ್ರ ಬರಡಾಗಗುತ್ತಿರುವದು ಆರಕ್ಷಕ ಇಲಾಖೆಗೂ ಶಾಪ ತಟ್ಟುವಂತಾಗಿದೆ.
ಕುರಿ ಬಲಿ ನೀಡಿ ಮಟ್ಕಾ ಪ್ರಾರಂಭ ;
ಸೆಪ್ಟಂಬರ್ 1 ರಿಂದ ಅವರ್ಸಾ, ಸಕಲಬೇಣ ಮತ್ತು ಹಾರವಾಡದಲ್ಲಿ ಮಟ್ಕಾ ನಿರಾಂತಕವಾಗಿ ತೆರೆದುಕೊಂಡಿದೆ. ಮಟ್ಕಾ ಪ್ರಾರಂಬೋತ್ಸವದ ಅಂಗವಾಗಿ ಕುರಿಯನ್ನು ಬಲಿ ನೀಡಿ, ತಮ್ಮ ಆಪ್ತೇಷ್ಠರನ್ನು ಊಟಕ್ಕೆ ಆಹ್ವಾನಿಸಿ ತಮ್ಮ ದಂಧೆಯನ್ನು ಪ್ರಾರಂಬಿಸಿಕೊAಡಿದ್ದಾರೆ. ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ. ಈ ಪ್ರತಿನಿಧಿಗಳ ಎಲ್ಲಾ ಸಾಮಾಜಿಕ ಮುಖಗಳ ಪರಿಚಯ ಮುಂದಿನ ದಿನದಲ್ಲಿ ಆಗಲಿದೆ. ಇದರ ಪರಿಣಾಮ ಮತದಾರರ ಮೇಲಿಯೂ ಇದೆ ಎಂಬ ಮಾತು ಕೇಳಿ ಬಂದಿದೆ.
ಜಿಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ನಾಗರಿಕರ ನೆಮ್ಮದಿಗೆ ಕೊಡುಗೆ ನೀಡಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.
