ಅಂಕೋಲಾ : ಯುವತಿಯಂತೆ ವೇಷ ಹಾಕಿಕೊಂಡು, ಜನರ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿ ಹಣ ಕೇಳುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮಶಾಸ್ತç ನೀಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.

ಕಾರವಾರ ಹಾಗೂ ಅಂಕೋಲಾ ಪಟ್ಟನದಲ್ಲಿ ಸೂರಜ್ ಎನ್ನುವ ಪುರಷನೊಬ್ಬ ಮಂಗಳಮುಖಿಯ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣವನ್ನು ವಸೂಲಿ ಮಾಡುತ್ತಿದ್ದ. ಹೀಗೆ ಹಣ ವಸೂಲಿ ಮಾಡುತ್ತಿರುವ ವಿಷಯವನ್ಬು ಅಸಲಿ ಮಂಗಳಮುಖಿಯರ ಅಂತರ0ಗ ಸಂಘಟನೆಯ ಸದಸ್ಯೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.

ಕೂಡಲೆ ಅಂಕೋಲಾ ಹಾಗೂ ಕಾರವಾರದಲ್ಲಿ ಕಾರ್ಯಾಚರಣಗೆ ಇಳಿದ ಮಂಗಳಮುಖಿಯರಾದ, ಸಂಧ್ಯಾ ಉಡುಪಿ, ಉಕ ಅಂತರ0ಗ ಸಂಘಟನೆಯ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ.

 ಚೂಡಿದಾರ ಧರಿಸಿ ಹೆಣ್ಣಂತೆ ವಯ್ಯಾರ ಪ್ರದರ್ಶಿಸುತ್ತ ನಾಗರಿಕರಿಂದ ಹಣ ಕೇಳುತ್ತಿದ್ದ ಇತನ ಚೂಡಿದಾರ ಬಿಚ್ಚಿಸಿ ಮಂಗಳಾರತಿ ಮಾಡಿದ್ದಾರೆ. ನಿಜವಾದ ಮಂಗಳಮುಖಿಯರು ನಿಷ್ಠಾವಂತರಿದ್ದಾರೆ. ಆದರೆ ಇಂಥ ನಕಲಿ ಮಂಗಳಮುಖಿ ವೇಷದಾರಿಗಳಿಂದ ನಿಜವಾದ ಮಂಗಳಮುಖಿಯರು ತಲೆ ತಗ್ಗಿಸುವಂತಾಗಿದೆ. ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಆಗ್ರಹಿದ್ದಾರೆ.

             ಸದ್ಯ ನವರಾತ್ರಿ ಹಾಗೂ ದೀಪಾವಳಿ ಹಬ್ಬ ಬರುತ್ತಿದ್ದು ಹೊರ ಜಿಲ್ಲೆಯಿಂದ ಕಾರವಾರ ಹಾಗೂ ಅಂಕೋಲಾಕ್ಕೆ ಮಂಗಳಮುಖಿಯರು ಬಂದು ಹಣಕ್ಕಾಗಿ ಭೇಡಿಕೆ ಇಡುತ್ತಾರೆ. ಇಂತ ಮಂಗಳಮುಖಿಯರಿಗೆ ಅಂಜದೆ, ನಿರ್ಭಿತವಾಗಿ ಪೊಲೀಸ್ ಅಥವಾ ಅಂತರ0ಗ ಸಂಘಟನೆಯ ಗಮನಕ್ಕೆ ತನ್ನಿ ಎಂದು ಆಯಿಷಾ ಹೊನ್ನಾವರ ತಿಳಿಸಿದ್ದಾರೆ.

ಚೂಡಿದಾರ ಧರಸಿ ಮಂಗಳಮುಖಿಯ ವೇಷ ಹಾಕಿಕೊಂಡು ಬೀಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಅಸಲಿ ಮುಖವನ್ನು ಬಯಲು ಮಾಡಿದ್ದೇವೆ. ಈ ರೀತಿ ಘಟನೆಗಳು ಉಕ ಜಿಲ್ಲೆಯಲ್ಲಿ ಅನೇಕ ಕಡೆ ಕಂಡು ಬರುತ್ತಿದೆ. ದಯವಿಟ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ವಿಶೇಷವಾಗಿ ಗಮನ ಹರಿಸಿ ಕಾರ್ಯಪ್ರವೃತ್ತರಾಗಬೇಕು ಎನ್ನುವದು ನಮ್ಮ ಆಶಯವಾಗಿದೆ.

ಆಯಿಷಾ ಹೊನ್ನಾವರ. ಉಪಾಧ್ಯಕ್ಷೆ ಅಂತರ0ಗ ಸಂಘಟನೆ.