ಅಂಕೋಲಾ : ವೈದ್ಯ ಹೆಗ್ಗಾರ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತದ ಒಂದು ಪುಟ್ಟ ಗ್ರಾಮ. ಕೃಷಿ, ಕಲೆ, ಸಂಸ್ಕ್ರAತಿ, ಕ್ರೀಡೆ ಸರ್ವ ರಂಗಗಳಲ್ಲಿ ಹೆಸರು ಮಾಡಿರುವ ವೈದ್ಯಹೆಗ್ಗಾರಿನಲ್ಲಿ ಯಕ್ಷಗಾನ ತಾಳಮದ್ದಲೆ, ನಾಟಕ ಕ್ರೀಡೆ, ಸಂಗೀತ ಪತ್ರಿಕಾರಂಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತಿಗಳಿಸಿದ ಜನರಿದ್ದಾರೆ.
ಈ ಊರಿನಲ್ಲಿ 1993 ರಲ್ಲಿ ಉತ್ಸಾಹಿ ಯುವಕರ ತಂಡ ವಿ.ಕೆ. ಸ್ಪೋರ್ಟ್ಸ್ ಕ್ಲಬ್ ಎಂಬ ಕ್ರೀಡಾ ಸಂಸ್ಥೆಯೊ0ದನ್ನು ರಚಿಸಿ ಕ್ರಿಕೆಟ್, ವಾಲಿಬಾಲ್,ಚೆಸ್, ಮೊದಲಾದ ಕ್ರೀಡೆಗಳನ್ನ ಬೆಳೆಸಿ ಪ್ರೋತ್ಸಾಹಿಸ ತೊಡಗಿದರು. 1993 ರ ನವ್ಹೆಂಬರ್ 1 ರಿಂದ ರಾಜ್ಯೋತ್ಸವ ಕಪ್ ಕ್ರಿಕೆಟ್‌ಗೆ ಸಂಬ0ಧಪಟ್ಟು ಪ್ರಾರಂಭಿಸಲಾಯಿತು. ಈ ಕ್ರೀಡಾ ಹಬ್ಬಕ್ಕೆ ಈಗ ಮುವತ್ತು ವರ್ಷದ ಪ್ರಾಯ.
ಕ್ರೀಡೆ ಮಾನಸಿಕ ನೆಮ್ಮದಿ ದೈಹಿಕ ಕಸರತ್ತು ನೀಡಿ ವೈದ್ಯ ಹೆಗ್ಗಾರಿನ ಯುವಕರಲ್ಲಿ ಪ್ರೀತಿ ವಿಶ್ವಾಸ, ಆತ್ಮೀಯತೆ ಪರಸ್ಪರ ಹೆಚ್ಚುವಂತೆ ಮಾಡಿ ಇದೀಗ ಮೂರು ದಶಕಗಳ ಸಂಭ್ರಮವನ್ನ ಆಚರಿಸಲು ಹೊರಟಿದ್ದಾರೆ.
ವಿಶಿಷ್ಟ ಪರಿಕಲ್ಪನೆಯಲ್ಲಿ ಕ್ರಿಕೆಟ್ ಪ್ರೀತಿಯನ್ನು ಮೈಗಂಟಿಸಿಕೊAಡ 40 ವರ್ಷ ಮೇಲ್ಪಟ್ಟವರಿಗಾಗಿಯೇ ಈ ಬಾರಿಯ ರಾಜ್ಯೋತ್ಸವ ಕಪ್ ಅಕ್ಟೋಬರ್ 26 ರಿಂದ 15 ತಂಡಗಳು 4 ದಿನಗಳ ಕಾಲ “ಲೆಜೆಂಡ್ಸ್ ಟ್ರೋಪಿಗಾಗಿ” ವೈದ್ಯ ಹೆಗ್ಗಾರಿನ ಸುಸಜ್ಜಿತ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಕ್ರೀಡಾಳುಗಳಿಗೆ ಹಾಗೂ ಕ್ರೀಡಾಸಕ್ತರಿಗೆ ಆಥಿತ್ಯ ನೀಡಲು ವೇದಿಕೆ ಸಿದ್ಧಗೊಂಡಿದೆ.

ಕ್ರಿಕೆಟ್ ಎನ್ನುವುದು ಇವತ್ತು 1 ವರ್ಷದ ಮಗುವಿನಿಂದ ಹಿಡಿದು 90 ವರ್ಷದವರು ಕೂಡ ಕುತೂಹಲದಿಂದ ವೀಕ್ಷಿಸುವ ಒಂದು ಅದ್ಭುತವಾದ ಕ್ರೀಡೆ. ಹಳವಳ್ಳಿಯ ಹಿರಿಯ ಆಟಗಾರರಾಗಿದ್ದ ದಿ. ಭಾಸ್ಕರ ಭಟ್ಟ, ವೈದ್ಯ ಹೆಗ್ಗಾರಿನ ದಿ.ಅನಂತ ಬಾಂದಿ ಮತ್ತು ದಿ.ನಾರಾಯಣ ಸಿದ್ದಿ ಅದ್ಭುತ ಕ್ರೀಡಾ ಪೋಷಕರಾಗಿದ್ದ ದಿ. ದತ್ತಾತ್ರಯ ವೈದ್ಯ ಇವರೆಲ್ಲರ ನೆನಪಿನಲ್ಲಿ ಈ ಕ್ರೀಡಾ ಹಬ್ಬ ನಡೆಯುತ್ತಿದೆ.
ಹಿರಿಯ ಆಟಗಾರಿಗೆ ಸನ್ಮಾನ ಈ ಕ್ರೀಡಾಕೂಟದ ವಿಶೇಷತೆ. ನಿಗದಿತ ಓವರ್ ಗಳ ಹಾರ್ಡ ಟೆನಿಸ್ ಬಾಲ್ ಪಂದ್ಯಾವಳಿ ಇದಾಗಿದ್ದು ವಿಶೇಷ ವಿನೂತನವಾದ ಪ್ರಯತ್ನವಾಗಿದೆ. ವಿ.ಕೆ.ಎಸ್ ಕ್ರೀಡಾ ಸಂಘ, ಮಹಾಗಣಪತಿ ಕ್ರೀಡಾ ಸಂಘ ಹೆಗ್ಗಾರ, ಊರ ನಾಗರಿಕರು ಹಾಗೂ ಎಲ್ಲಾ ಮಿತ್ರ ಬಾಂಧವರ ಸಂಘಟನೆ ಹಾಗೂ ಸಹಾಯ ಸಹಕಾರದೊಂದಿಗೆ ಈ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಇದಕ್ಕೆ ಕ್ರೀಡಾ ಪೋಷಕರ ಸಹಾಯ ಸಹಕಾರ ಅತ್ಯಗತ್ಯವಾಗಿದೆ. ಎಲ್ಲಾ ಕ್ರೀಡಾಸಕ್ತರು ಕ್ರೀಡಾ ಪೋಷಕರು ಈ ಪಂದ್ಯಾವಳಿಯ ಯಶಸ್ವಿಗೆ ಸಹಕರಿಸಬೇಕೆಂದು ಕ್ರೀಡಾಕೂಟದ ಸಂಯೋಜಕರಾದ ರಾಜಾರಾಮ ಎನ್ ವೈದ್ಯ ( 8951134311 ) ಮತ್ತು ಸುಮಂತ ಭಾಗ್ವತ (8296071852) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thank You so much Raghu Sir
tq