ಅಂಕೋಲಾ: ಸೈಬರ್ ಕ್ರೆö ಜಾಲದಲ್ಲಿ ಅನ್ಯಾಯವಾಗಿ ಸಿಕ್ಕಿ ಹಾಕಿಕೊಂಡಿದ್ದ ಅಂಕೋಲಾದ ವ್ಯಕ್ತಿಗೆ ನ್ಯಾಯ ಕೊಡಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬ್ಯಾಂಕ್ ಖಾತೆ ಏಕಾಏಕಿ ಲಾಕ್ :

ಅಂಕೋಲಾ ಪಟ್ಟಣದ ಎನ್.ವಿಘ್ನೇಶ್ವರ ಎಂಬುವವರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದಾರೆ. ಅವರು ಅಂಕೋಲಾದಲ್ಲಿರುವ ತನ್ನ ತಂದೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣವನ್ನು ಭರಿಸಿ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿದ್ದರು. ಹೀಗೆ ಲಕ್ಷಾಂತರ ರೂಪಾಯಿ ವ್ಯವಹಾರ ಚಾಲ್ತಿಯಲ್ಲಿದ್ದ ವಿಘ್ನೇಶ್ವರ ಇವರ ಬ್ಯಾಂಕ್ ಖಾತೆಯು ಏಕಾಏಕಿ ಲಾಕ್ ಆಗಿರುವ ಕುರಿತು ಮೆಸೇಜ್ ರವಾನೆಯಾಗಿತ್ತು. ದಂಗಾದ ವಿಘ್ನೇಶ್ ಬ್ಯಾಂಕಿಗೆ ತೆರಳಿ ವಿಚಾರಿಸಿದ್ದು, ಬೆಂಗಳೂರಿನ ಸೋಮಶೇಖರ ಎಂಬುವವರು ಸೈಬರ್ ಕ್ರೆö ಆಡಿಯಲ್ಲಿ ಬೆಂಗಳೂರಿನ ಶಿವಾಜಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣದಲ್ಲಿರುವ ಸಾರಾಂಶ ಏನು..?

ಬೆಂಗಳೂರಿನಲ್ಲಿ ಭುವಿ ಬ್ಯೂಟಿ ಕ್ಲಿನಿಕ್ ಹೊಂದಿರುವ ಸೋಮಶೇಖರ ಎಂಬುವವರಿಗೆ ವಾಟ್ಸಾಪ್ ಕಾಲ್ ಮಾಡಿ ಪಾರ್ಟ್ ಟೈಂ ಉದ್ಯೋಗದ ಕುರಿತು ವಿವರಿಸಿದ್ದರೆನ್ನಲಾಗಿದೆ. ಮಾತಿನಲ್ಲೇ ಸೋಮಶೇಖರರವರ ವಿಶ್ವಾಸ ಕುದುರಿಸಿಕೊಂಡು ನೀಡಿದ ವೆಬ್‌ಸೈಟ್‌ನಲ್ಲಿ ಹಣ ತೊಡಗಿಸಿದರೆ ಹಂತ ಹಂತವಾಗಿ ಲಕ್ಷಾಂತರ ರೂಪಾಯಿಗಳು ನಿಮ್ಮ ಖಾತೆಗೆ ಸಂದಾಯವಾಗುತ್ತದೆ ಎಂದು ನಂಬಿಸಿದ್ದರು. ಹೀಗಾಗಿ ಸೋಮಶೇಖರ ಎಂಬುವವರು ಎಕ್ಸಿಸ್ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 6 ಲಕ್ಷದ 76513 ರೂ ಹಣ ಭರಿಸಿದ್ದರು. ಆದರೆ ಹಣ ಬ್ಯಾಂಕ್ ಖಾತೆಗೆ ತುಂಬಿಕೊAಡವರು ಸೋಮಶೇಖರವರ ಸಂಪರ್ಕದಿAದ ದೂರವಾಗಿಬಿಟ್ಟಿದ್ದರು. ಹೀಗಾಗಿ ಪೋಲಿಸ್ ಠಾಣೆಗೆ ತೆರಳಿದ ಸೋಮಶೇಖರ ಕರೆ ಮಾಡಿದ ಮೊಬೈಲ್ ನಂಬರ ಪೋಲಿಸರಿಗೆ ನೀಡಿದ್ದರು. ತನಿಖೆ ನಡೆಸಿದ ಪೋಲಿಸರಿಗೆ ಕರೆ ಮಾಡಿದ ನಂಬರ ಅಂಕೋಲಾ ವಿಘ್ನೇಶ್ವರ ಎಂಬುವವರದ್ದು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯನ್ನು ಲಾಕ್ ಮಾಡಿ ವಿಚಾರಣೆ ನಡೆಸಿದ್ದರು.

ಅಂಕೋಲಾದವನು ಅನ್ಯಾಯವಾಗಿ ಸಿಲುಕಿಕೊಂಡಿದ್ದನು

ಸೋಮಶೇಖರ ಎಂಬುವವರಿಗೆ ಕರೆ ಮಾಡಿ ಹಣವನ್ನು ಎಗರಿಕೊಂಡಿದ್ದ ವ್ಯಕ್ತಿಯು ಅಂಕೋಲಾದ ವಿಘ್ನೇಶ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ವಿಘ್ನೇಶನ ಬ್ಯಾಂಕ್ ಖಾತೆಗೆ ಯಾವುದೇ ಹಣ ಜಮಾ ಆಗದೆ ಇರುವದು ಬ್ಯಾಂಕ್ ಸ್ಟೇಟ್‌ಮೆಂಟ್‌ನಿ0ದ ತಿಳಿದುಬಂದಿತ್ತು. ಇದರಿಂದಾಗಿ ಅಮಾಯಕ ಯುವಕನ ಬ್ಯಾಂಕ್ ಖಾತೆಯನ್ನ ಪೊಲೀಸರು ಸ್ಥಗಿತಗೊಳಿಸಿದ್ದರು.

ತನಗಾದ ಅನ್ಯಾಯವನ್ನು ಬೆಂಗಳೂರಿನಲ್ಲಿ ಇರುವ ಹಲವರಲ್ಲಿ ತೋಡಿಕೊಂಡಿದ್ದರು. ಆದರೆ ಪ್ರಯೋಜನವಾಗದ ಹಿನ್ನೆಲೆಯಲ್ಲಿ ವಿಷಯವನ್ನು ಪತ್ರಕರ್ತ ರಾಘು ಕಾಕರಮಠ ಬಳಿ ತೋಡಿಕೊಂಡಿದ್ದು, ಅವರು ಬೆಂಗಳೂರಿನ ಗೋವಿಂದಪುರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಎಚ್. ಜಯರಾಜ್ ಗಮನಕ್ಕೆ ತಂದಿದ್ದರು.

ಅಂಕೋಲಾ ತಾಲೂಕಿನ ಬಗ್ಗೆ ಅಭಿಮಾನ ಹೊಂದಿರುವ ಪೋಲಿಸ್ ಅಧಿಕಾರಿ ಜಯರಾಜ್ ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಯಾವ ತಪ್ಪೂ ಇಲ್ಲದೇ ಸೈಬರ್ ಕ್ರೆ0 ಅಡಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ವಿಘ್ನೇಶ್ವರ ಅವರೊಂದಿಗೆ ಶಿವಾಜಿನಗರದಲ್ಲಿರುವ ಪೋಲಿಸ್ ಠಾಣೆಗೆ ತೆರಳಿ ವಾಸ್ತವಾಂಶವನ್ನು ವಿವರಿಸಿ ನ್ಯಾಯ ಒದಗಿಸಿದ್ದಾರೆ. ಈ ಹಿಂದೆ ಬೆಳಂಬಾರದ ಯುವತಿಯೋರ್ವಳು ಬೆಂಗಳೂರಿನಲ್ಲಿ ಕೊಲೆಯಾದಾಗ, ಮುಗ್ದ ಈ ಬಡ ಏನು ಮಾಡಬೇಕೆಂದು ತೋಚದಾಗಿತ್ತು. ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದ ಇನ್ಸ್ಪೆಕ್ಟರ್ ಜಯರಾಜ್ ಶವವನ್ನು ಮನೆಗೆ ಕಳುಹಿಸುವ ತನಕ ಪ್ರತಿಯೊಂದು ಹಂತಗಳಲ್ಲಿ ನೆರವಾಗುವ ಮೂಲಕ ಮಾನವೀಯತೆ ಮೆರೆದಿರುವುದನ್ನು ಸ್ಮರಿಸಿಕೊಳ್ಳಬಹುದು.

ಅಂಕೋಲಾ ತಾಲೂಕಿನ ಅಪಾರ ಕಾಳಜಿ ಹೊಂದಿರುವ ಪೋಲಿಸ್ ಅಧಿಕಾರಿ ಎಚ್. ಜಯರಾಜ್ ಅವರ ಮಾನವೀಯತೆಯ ಕಾರ್ಯಕ್ಕೆ ನಾವೆಲ್ಲರೂ ಆಭಾರಿಯಾಗಿದ್ದೇವೆ. ತಾವ ತಪ್ಪೆಸಗದೇ ಅನ್ಯಾಯವಾಗಿ ಸೈಬರ್ ಕ್ರೆö ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ವಿಘ್ನೇಶ್ವರ ಅವರಿಗೆ ನ್ಯಾಯ ಕೊಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ರಾಜೇ0ದ್ರ ವಿ.ನಾಯ್ಕ (ರಾಜ್ಯ ಉಪಾಧ್ಯಕ್ಷರು, ರಾಷ್ಟಿçÃಯ ಈಡಿಗ ಮಹಾ ಮಂಡಳಿ.)

ಅಂಕೋಲಾಕ್ಕೆ ಎಷ್ಟೋ ಪೊಲೀಸ್ ಅಧಿಕಾರಿಗಳು ಬಂದು ನಿರ್ಗಮಿಸಿದ್ದಿದೆ. ಆದರೆ ಎಚ್. ಜಯರಾಜ್ ಅಂಥ ಅಪರೂಪದ ಮಾನವೀಯ ಮನುಷ್ಯ ಸಿಗುವದು ಅಪರೂಪ. ಅಂಕೋಲಾದವರು ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಅನ್ಯಾಯವಾಗಿ ತೊಂದರೆಗೆ ಸಿಲುಕಿಯೋ ಅಥವಾ ಯಾವುದೆ ಸಂದರ್ಭದಲ್ಲಿ ಸಹಾಯ ಬೇೆಕಾದಲ್ಲಿ ಎಚ್. ಜಯರಾಜ್ ಅವರು ಮನೆ ಮಗನಂತೆ ನಿಲ್ಲುತ್ತಾರೆ. ಎಚ್. ಜಯರಾಜ್ ಅವರು ಸಹೃದಿಯಗಳಿಗೆ ಸ್ನೇಹಜೀಯಾದರೆ, ದುಷ್ಠರಿಗೆ ಸಿಂಹಸ್ವಪ್ನರಾಗಿದ್ದಾರೆ.

                              ಮಾದೇವ ಗೌಡ. ಮಾಜಿ ಅಧ್ಯಕ್ಷರು ಗ್ರಾಪಂ ಬೆಳಂಬಾರ.