ಅಂಕೋಲಾ : ತೆಲಂಗಾಣದ ವಾರಂಗಲ್‌ನಲ್ಲಿ ನಡೆದ 34 ನೇ ದಕ್ಷಿಣ ಭಾರತ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಶಸ್ ಪಿ. ಕುರುಬರ್ 18 ವರ್ಷದೊಳಗಿನ ಬಾಲಕರ ಹೆಮರ್ ಥ್ರೋನಲ್ಲಿ 65.46 ಮೀ. ಎಸೆದು ನೂತನ ದಾಖಲೆ ನಿರ್ಮಿಸಿರುತ್ತಾನೆ.
ಹಾಗೆ ಜಿಲ್ಲೆಯ ಇನ್ನೊರ್ವ ಅಥ್ಲೆಟ್ ಕೆವಿನ್ ಸಿದ್ದಿ 14 ವರ್ಷದೊಳಗಿನ ಬಾಲಕರ 60 ಮೀ. ಓಟದ ಸ್ಫರ್ಧೆಯಲ್ಲಿ 7.38 ಸೆಕೆಂಡ್ಸ್ನೊAದಿಗೆ ನೂತನ ದಾಖಲೆಯನ್ನು ನಿರ್ಮಿಸಿದ್ದಾನೆ ಎಂದು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಆರ್.ನಾಯಕ ಬೇಲೇಕೇರಿ ಅವರು ಸಂಸ್ಥೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
