ಮುಂಡಗೋಡ : ಜಾಗದ ಒತ್ತುವರಿ ವಿಚಾರವಾಗಿ ಹಳೆಯ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಪಟ್ಟಣದ ಇಂದಿರಾ ನಗರ ಪ್ಲಾಟ್ನಲ್ಲಿ ನಡೆದಿದೆ.
ಹಸನ್ ಖಾನ್ ಪಠಾಣ ಹಲ್ಲೆಗೊಳಗಾದವರು. ಇಂದಿರಾ ನಗರ ಪ್ಲಾಟ್ನ ಅಬ್ದುಲ್ ರಫೀಕ್ ಗೌಸಮುದ್ದಿನ ಟಪಾಲ, ಸೊಹೇಲ್ ಬಿಲಾಲಸಾಬ ನಾನಪುರ, ಮಹಮ್ಮದ ಗೌಸ್ ಹಜರತ್ ಬಿಲಾಲ ಟಪಾಲ, ಅಬ್ದುಲ್ ಖಲೀಮ್ ಟಪಾಲ ಹಲ್ಲೆ ನಡೆಸಿರುವ ಆರೋಪಿಗಳು.
ಇಂದಿರಾ ನಗರ ಪ್ಲಾಟ್ ನಲ್ಲಿರುವ ಮಾಬುಶಬಾನಿ ಜಂಡೆಕಟ್ಟಿ ಹತ್ತಿರ ಜಂಡೆಕಟ್ಟಿ ಜಾಗದ ಒತ್ತುವರಿ ವಿಚಾರವಾಗಿ ಕಮಿಟಿಯವರು ಸಭೆ ನಡೆಸಿದ್ದಾಗ ಜಾಗದ ಸಲುವಾಗಿ ಕಳೆದ ಮೂರು ವರ್ಷಗಳಿಂದ ಹಸನ್ ಖಾನ್ ಅವರೊಂದಿಗೆ ವೈಷಮ್ಯದಿಂದ ಇದ್ದ ಆರೋಪಿಗಳು ಹಲ್ಲೆ ನಡೆಸಿ ಅಬ್ದುಲ್ ರಫೀಕ್ನು ಸೊಹೇಲ್ ನ ಕೈಯಲ್ಲಿ ಇದ್ದ ಚಾಕೂ ತೆಗೆದುಕೊಂಡು ಹಸನ್ ಖಾನ್ ಅವರ ಕುತ್ತಿಗೆಗೆ ಮತ್ತು ಪಕ್ಕೆಗೆ ಇರಿದು ಗಂಭೀರವಾಗಿ ಗಾಯಪಡಿಸಿ ನನಗೂ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಸನ್ ಖಾನ್ ಪಠಾಣ ಮಗ ಇಸ್ಮಾಯಿಲ್ ಪಠಾಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಿಎಸೈ ಯಲ್ಲಲಿಂಗ ಕಣ್ಣೂರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
