ಅಂಕೋಲಾ: ಕೇಣಿಯ ಶ್ರೀ ದುರ್ಗಾ ದೇವಿ ನವರಾತ್ರಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ದುರ್ಗಾದೇವಿಯ ಬೃಹತ್ ಮೂರ್ತಿಯು ಆಕರ್ಷಕವಾಗಿ ಗಮನ ಸೆಳೆಯುತ್ತಿದೆ.

ಅ.21 ರ ಶನಿವಾರದಂದು ಮದ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಅ 23 ರ ಸೋಮವಾರದಂದು ಸಂಜೆ 7.30 ಕ್ಕೆ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸವಾಲು ಕಾರ್ಯಕ್ರಮ ನಡೆಯಲಿದೆ. 

ಅ 24 ರ  ಮಂಗಳವಾರದಂದು ಶ್ರೀ ದುರ್ಗಾ ದೇವಿಯ ವಿಸರ್ಜನೆಯು ಭವ್ಯ ಮೆರವಣಿಗೆಯ ಮೂಲಕ ನಡೆಯಲಿದ್ದು ಭಕ್ತರು ಶ್ರೀ ದೇವಿಯ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಸಮರ್ಪಿಸಬೇಕೆಂದು ಸಮಿತಿಯ ಅಧ್ಯಕ್ಷ ಅಶೋಕ ರಾಮ ಬಂಟ್, ಖಜಾಂಚಿ ವಿನಾಯಕ ಅಣ್ಣಪ್ಪ ಬಂಟ್ ಹಾಗೂ ಸದಸ್ಯರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.