ವರದಿ : ಶಾಂತು ಹೊನ್ನೆಕೇರಿ.
ಅಂಕೋಲಾ : ಹೊನ್ನೆಕೇರಿಯ ಶ್ರೀ ಶಾರದಾ ದೇವಿ ಉತ್ಸವ ಸಮಿತಿಯಿಂದ 33 ನೇ ವರ್ಷದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಶಾರದೆಯ ಮೂರ್ತಿಯು ಆಕರ್ಷಕವಾಗಿ ಗಮನ ಸೆಳೆಯುತ್ತಿದೆ.

ನವರಾತ್ರಿಯ ಘಟಸ್ಥಾಪನೆಯ ದಿನ ವಿರಾಜಮಾನಳಾಗಿರುವ ಶ್ರೀ ಶಾರದೆಯು ಭಕ್ತರ ಧನ್ಯತೆಗೆ ಕಾರಣಳಾಗಿದ್ದಾಳೆ. ಪ್ರಸ್ತುತ ವರ್ಷದ ಶ್ರೀ ಶಾರದೆಯ ಮೂರ್ತಿಯನ್ನ ಹೊನ್ನಕೇರಿಯ ಅಥರ್ವ ಮಹೇಶ ನಾಯ್ಕ ಅವರು ಕೊಡುಗೆಯಾಗಿ ನೀಡಿ ತಮ್ಮ ಶ್ರದ್ದಾಭಕ್ತಿ ಸಮರ್ಪಿಸಿದ್ದಾರೆ.

ಅಕ್ಟೋಬರ್ 20 ರ ಶುಕ್ರವಾರದಂದು ಶ್ರೀ ಶಾರದೆಯ ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಸವಾಲು ಮತ್ತು ಸ್ಥಳೀಯ ಪುಟಾಣಿ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್. 21 ರ ಶನಿವಾರದಂದು ಶ್ರೀ ಶಾರದೆಯ ವಿಸರ್ಜನಾ ಕಾರ್ಯಕ್ರಮವು ಭವ್ಯ ಮೆರವಣಿಯ ಮೂಲಕ ನಡೆಯಲಿದ್ದು, ಆಸ್ತಿಕ ಭಕ್ತಾಧಿಗಳು ಶ್ರೀ ಶಾರದೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಸಮರ್ಪಿಸಬೇಕೆಂದು ಉತ್ಸವ ಸಮಿತಿಯ ಅಧ್ಯಕ್ಷ ದಿಗಂಬರ ಎನ್ ಆಗೇರ ಹಾಗೂ ಸರ್ವ ಪದಾಧಿಕಾರಿಗಳು ಸದಸ್ಯರು ವಿನಂತಿಸಿದ್ದಾರೆ.
