ಅಂಕೋಲಾ ; ಭಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ (48) ನಾಪತ್ತೆಯಾಗಿದ್ದು, ಇತನನ್ನು ಹುಡುಕಿಕೊಡುವಂತೆ ಇತನ ಕುಟುಂಬದವರು ಅಂಕೋಲಾ ಪೊಲೀಸರ ಮೊರೆ ಹೋಗಿದ್ದಾರೆ.

 ರೈತಾಬಿ ಕೆಲಸ ಮಾಡಿಕೊಂಡಿದ್ದ ಅರವಿಂದ ವೆಂಕಟ್ರಮಣ ನಾಯಕ ಇತನಿಗೆ 2009 ರಲ್ಲಿ ಮದುವೆಯಾಗಿ 2012 ರಲ್ಲಿ ಡಿವೋರ್ಸ್ ಆಗಿತ್ತು. ಅರವಿಂದನು ಒಬ್ಬನೇ ತನ್ನ ಮೂಲ ಮನೆಯಲ್ಲಿ ವಾಸವಾಗಿದ್ದನು.

ತನ್ನ ಹೆಂಡತಿ ಚಿಟ್ಟುಹೋದ ನಂತರ ಅರವಿಂದನು ಸರಾಯಿ ಕುಡಿಯಲು ಸುರು ಮಾಡಿದ್ದ. ಆಗಾಗ ತನ್ನ ತಮ್ಮನಾದ ನವೀನ ವೆಂಕಟ್ರಮಣ ನಾಯಕ ಅವರ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನು. ಅಕ್ಟೋಬರ 5 ರಂದು 9 ಗಂಟೆಗೆ ಮನೆಯಿಂದ ತನ್ನ ತಾಯಿಯ ಮನೆಯ ಹತ್ತಿರ ಹೋಗಿ ಅಲ್ಲಿಂದ ತಾಯಿಯ ಬಾಡಿಗೆ ಮನೆಯ ಮಾಲಕರ ತಮ್ಮ ಗಿರೀಶ ಎಚ್. ನಾಯಕ ಅವರ ಮನೆಯ ಹತ್ತಿರ ಹೋಗಿದ್ದವನು, ಆನಂತರ ಎಲ್ಲಯೋ ಹೋಗಿ ಕಾಣಿಯಾಗಿದ್ದಾನೆ ಎಂದು ನವೀನ ವೆಂಕಟ್ರಮಣ ನಾಯಕ ಅವರು ಪೊಲೀಸ್ ದೂರಿನಲ್ಲಿ ವಿವರಿಸಿದ್ದಾರೆ.

ಅಂಕೋಲಾ ಠಾಣೆಯ ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಅರವಿಂದ ನಾಯಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಇತನ ಬಗ್ಗೆ ಮಾಹಿತಿ ಕಂಡು ಬಂದಲ್ಲಿ 9480805250 ಅಥವಾ 9480805268 ಸಂಪರ್ಕಿಸುವ0ತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಣ್ಮರೆಯಾದ ಅರವಿಂದ ಇತನು 6 ಪೂಟ್ 10 ಇಂಚ್ ಎತ್ತರವಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದು, ಗೋದಿ ಮೈಬಣ್ಣ, ಗೋಲು ಉದ್ದ ಮುಖ, ತೆಳ್ಳಗಿನ ಮೈಕಟ್ಟು, ತಲೆಯಲ್ಲಿ ಚಿಕ್ಕ ಕೂದಲು, ಮೀಸೆ ಮತ್ತು ಕಪ್ಪು ಬಿಳಿ ಮಿಶ್ರಿತ್ ಪ್ರೆಂಚ್ ಕಟ್ ದಾಡಿ ಇದ್ದು, ಕಾಣೆಯಾದ ಸಮಯದಲ್ಲಿ ಕಡು ನೀಲಿ ಬಣ್ಣದ ಟಿಶರ್ಟ, ಕಪು ಬಣ್ಣದ ಕಾಟನ್ ಪ್ಯಾಂಟ್ ಹಾಗೂ ಚಪ್ಪಲಿ ಧರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.