ಮುಂಡಗೋಡ : ತಾಲೂಕಿನ ಪಾಳಾ ಗ್ರಾಮದ ಯುವತಿಯೊಬ್ಬಳು ಕಾಣೆಯಾದ ಘಟನೆ ನಡೆದಿದೆ.

ಪಾಳಾ ಗ್ರಾಮದ ಈರಪ್ಪ ಭಜಂತ್ರಿ ಎಂಬುವರ ಮಗಳು ಕಾಣೆಯಾಗಿದ್ದು ಈಕೆ ಅ.20 ರಂದು ಬೆಳಗ್ಗೆ ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಹೋದವಳು ಇನ್ನೂ ಬಂದಿರುವುದಿಲ್ಲ. ಗಾಬರಿಗೊಂಡು ನಾನು ಮತ್ತು ನನ್ನ ಹೆಂಡತಿ ನಮ್ಮ ಮನೆಯ ಅಕ್ಕಪಕ್ಕದವರಿಗೆ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿರುವ ನಮ್ಮ ಸಂಬಂಧಿಕರಿಗೆ ಕೇಳಿ ನೋಡಿದಾಗ ಅವರು ಬಂದಿಲ್ಲ. ಯಾವುದಾದರೂ ಊರಿಗೆ ಹೋಗಿರಬಹುದು ಬರುತ್ತಾಳೆ ಅಂತಾ ಸುಮ್ಮನಿದ್ದೆವು. ಅದರೆ ನನ್ನ ಮಗಳು ಇನ್ನೂ ಮನೆಗೆ ಬಂದಿಲ್ಲ ಅವಳನ್ನು ಹುಡುಕಿ ಕೊಡಿ ಎಂದು ಕಾಣೆಯಾದ ಯುವತಿಯ ತಂದೆ ಈರಪ್ಪ ಭಜಂತ್ರಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪಿಎಸೈ ಯಳ್ಳಲಿಂಗ ಕಣ್ಣೂರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗೆ ಕಾನೂನು ಕ್ರಮ ಕೈಗೊಂಡಿದ್ದಾರೆ .