ಅಂಕೋಲಾ : ಇಲ್ಲಿನ ಪೊಲೀಸ ಠಾಣೆಯ ಪಿಎಸೈ ಜಯಶ್ರೀ ಪ್ರಭಾಕರ ಅವರನ್ನು ಹೊನ್ನೆಕೇರಿಯ ಶ್ರೀ ಶಾರದಾ ದೇವಿ ಉತ್ಸವ ಸಮಿತಿ ಹಾಗೂ ಅಂಕೋಲಾ ನಾಗರಿಕರಿಂದ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಪಿಸೈ ಜಯಶ್ರೀ ಪ್ರಭಾಕರ ಮಾತನಾಡಿ ಸ್ವಾತಂತ್ರö್ಯ ಸಂಗ್ರಾಮ ಐತಿಹಾಸಿಕ ನೆಲವಾದ ಅಂಕೋಲಾದಲ್ಲಿ ಸೇವೆ ಸಲ್ಲಿಸುವದೆ ಒಂದು ಹೆಮ್ಮೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯೊಂದಿಗೆ ನಾನಿಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬ ಆತ್ಮ ತೃಪ್ತಿ ನನ್ನಲ್ಲಿದೆ ಎಂದರು.

ಸಮಿತಿಯ ಅಧ್ಯಕ್ಷ ದಿಗಂಬರ ಆಗೇರ ಮಾತನಾಡಿ ಅಂಕೋಲಾ ಠಾಣೆಯ ಅಧಿಕಾರ ಸ್ವೀಕರಿಸಿದ ಕೆಲವೆ ತಿಂಗಳಲ್ಲೆ ಅತ್ಯುತ್ತಮ ಅಧಿಕಾರಿಯಾಗಿ ಜಯಶ್ರೀ ಪ್ರಭಾಕರ ನೊಂದವರ ಪಾಲಿಗೆ ನಿಂತು, ಪ್ರಾಮಾಣಿಕ ಅಧಿಕಾರಿಯಾಗಿ ಗಮನ ಸೆಳೆದಿರುವದು ಹರ್ಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ನೌಕಾನೆಲೆಯ ಸಿಬ್ಬಂದಿ ಮಂಜುನಾಥ ಜಟ್ಟಿ ಹನೇಹಳ್ಳಿ, ಉದ್ಯಮಿ ಅಥರ್ವ ಮಹೇಶ ನಾಯ್ಕ ಹಾಗೂ ಶ್ರೀ ದೇವರ ಪ್ರಸಾದದ ತಾಟನ್ನು ಸವಾಲಿನಲ್ಲಿ ಸ್ವೀಕರಿಸಿದ ಸುರೇಶ ಹೊನ್ನಪ್ಪ ಆಗೇರ ಅವರನ್ನು ಗೌರವಿಲಾಯಿತು.
ಹೊನ್ನೆಕೇರಿಯ ಶ್ರೀ ಶಾರದಾ ದೇವಿ ಉತ್ಸವ ಸಮಿತಿಯ ಸರ್ವ ಪದಾಧಿಕಾರಿಗಳು, ಸದಸ್ಯರು, ಪ್ರಮುಖ ಅಶೋಕ ಎಲ್. ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಹೊನ್ನೇರಿಯ ಪುಟಾಣಿ ಪ್ರತಿಬೆಗಳಿಂದ ಅನಾವರಣಗೊಂಡ ಸಾಂಸ್ಕçತಿಕ ಕಾರ್ಯಕ್ರಮವು ಜನಮನಸೂರೆಗೊಳಿಸಿತು.

