ಚಿತ್ರ ಕೃಪೆ : ಸಚೀನ ಅಸ್ನೋಟಿಕರ
ವರದಿ : ರಾಘು ಕಾಕರಮಠ.
ಅಂಕೋಲಾ ; ಕಳೆದ 9 ಹಿಂದೆ ನಿಗೂಡವಾಗಿ ನಾಪತ್ತೆಯಾಗಿದ್ದ ಭಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ (48) ಶವವಾಗಿ ಭಾವಿಕೇರಿಯ ದುಣ್ಣೆ ಕೆರೆಯಲ್ಲಿ ಗುರುವಾರ ಮದ್ಯಾಹ್ನ ಪತ್ತೆಯಾಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ಅರವಿಂದ ನಾಯಕ ಅವರ ಸಾವಿನ ಕಾರಣದ ಕುರಿತಾಗಿ ಆಳವಾಗಿ ತನಿಖೆಗೆ ಮುಂದಾಗಿದ್ದಾರೆ. ಯಾರಾದರೂ ಕೊಲೆ ಮಾಡಿದ್ದಾರೆಯೆ ಅಥವಾ ಆಕಸ್ಮಿಕ ಸಾವೆ ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆಯೆ ಎಂದು ಪೊಲೀಸರು ತನಿಖೆಗೆ ಇಳಿದಿದ್ದು, ಮರೋಣೋತ್ತರ ಪರೀಕ್ಷೆಯ ನಂತರವೆ ಪೊಲೀಸರು ಸ್ಪಷ್ಠ ನಿಲುವಿಗೆ ಬರಲು ತಿರ್ಮಾನಿಸಿದ್ದಾರೆ.
ಹಲವು ಅನುಮಾನದ ನಡುವೆ :
ಭಾವಿಕೇರಿಯ ಅರವಿಂದ ವೆಂಕಟ್ರಮಣ ನಾಯಕ ಅವರ ಸಾವಿವು ಹಲವು ಅನುಮಾನಗಳನ್ನು ಹುಟ್ಟು ಹಾಕಿಕೊಂಡಿದೆ. ಭಾವಿಕೇರಿಯ ದೊಣ್ಣೆ ಕೆರೆಯಲ್ಲಿ ಕೇವಲ ಸೊಂಟದ ತನಕ ನೀರಿದೆ. ಈ ನೀರಿನಲ್ಲಿ ಅರವಿಂದ ನಾಯಕ ಹೇಗೆ ಮುಳಗಿ ಸತ್ತ ಎನ್ನುವದು ಪ್ರತ್ಯಕ್ಷದರ್ಶಿಗಳ ಪ್ರಶ್ನೆಯಾಗಿ ನಿಂತಿದೆ.
ರಾಯ ಮಾಸ್ತರರ ಕುಟುಂಬದ ಕುಡಿಯಾಗಿ ಸಂಬಾವಿತನಾಗಿದ್ದ ಅರವಿಂದ ವೆಂಕಟ್ರಮಣ ನಾಯಕ ವೈಯಕ್ತಿಕ ಜೀವನದಲ್ಲಿ ಅನೇಕ ನೋವುಗಳನ್ನು ಉಂಡು ಬಸವಳಿದಿದ್ದ. ಭಾವಿಕೇರಿಯ ತನ್ನ ಹಳೆಯ ಮನೆಯಲಲಿ ಒಬ್ಬಂಟಿಯಾಗಿ ಇರುತ್ತಿದ್ದ ಈತ ಆತ್ಮಹತ್ಯೆಯಂಥ ಕೃತ್ಯಕ್ಕೆ ಇಳಿಯದ ವ್ಯಕ್ತಿತ್ವ ಅವನಲ್ಲಿತ್ತು. ಹಾಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆ ಇದ್ದಿದ್ದರೆ ತಾನು ಒಬ್ಬಂಟಿಯಾಗಿ ಇರುತ್ತಿದ್ದ ಮನೆಯಲ್ಲೆ ಮಾಡಿಕೊಳ್ಳಬಹುದಿತ್ತು. ಈ ಸಾವಿನ ಹಿಂದೆ ಬೇರೆಯೆ ಮರ್ಮ ಇರುಬಹುದು ಎಂದು ನಾಗರಿಕರು ಸಂಶÀಯ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಏನಾಗಿತ್ತು..?
ರೈತಾಬಿ ಕೆಲಸ ಮಾಡಿಕೊಂಡಿದ್ದ ಅರವಿಂದ ವೆಂಕಟ್ರಮಣ ನಾಯಕ ನಾಪತ್ತೆಯಾಗಿದ್ದಾನೆ ಎಂದು ಅಕ್ಟೋಬರ್ 19 ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸಹೋದರ ನವೀನ ವೆಂಕಟ್ರಮಣ ನಾಯಕ ದೂರು ನೀಡಿದ್ದರು.
ನವೀನ ತನ್ನ ದೂರಿನಲ್ಲಿ ವಿವರಿಸಿ ಅರವಿಂದ ವೆಂಕಟ್ರಮಣ ನಾಯಕ ಇತನಿಗೆ 2009 ರಲ್ಲಿ ಮದುವೆಯಾಗಿ 2012 ರಲ್ಲಿ ಡಿವೋರ್ಸ್ ಆಗಿತ್ತು. ಅರವಿಂದನು ಒಬ್ಬನೇ ತನ್ನ ಮೂಲ ಮನೆಯಲ್ಲಿ ವಾಸವಾಗಿದ್ದನು. ತನ್ನ ಹೆಂಡತಿ ಚಿಟ್ಟು ಹೋದ ನಂತರ ಅರವಿಂದನು ಸರಾಯಿ ಕುಡಿಯಲು ಸುರು ಮಾಡಿದ್ದ. ಆಗಾಗ ತನ್ನ ತಮ್ಮನಾದ ನವೀನ ವೆಂಕಟ್ರಮಣ ನಾಯಕ ಅವರ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನು.
ಅಕ್ಟೋಬರ 5 ರಂದು 9 ಗಂಟೆಗೆ ಮನೆಯಿಂದ ತನ್ನ ತಾಯಿಯ ಮನೆಯ ಹತ್ತಿರ ಹೋಗಿ ಅಲ್ಲಿಂದ ತಾಯಿಯ ಬಾಡಿಗೆ ಮನೆಯ ಮಾಲಕರ ತಮ್ಮ ಗಿರೀಶ ಎಚ್. ನಾಯಕ ಅವರ ಮನೆಯ ಹತ್ತಿರ ಹೋಗಿದ್ದವನು, ಆನಂತರ ಎಲ್ಲಯೋ ಹೋಗಿ ಕಾಣಿಯಾಗಿದ್ದಾನೆ. ತನ್ನ ಸಹೋದರನನ್ನು ಹುಡುಕಿ ಕೊಡಿ ಎಂದು ಪೊಲೀಸ್ ದೂರು ನೀಡಿದ್ದರು.
ಅಂಕೋಲಾ ಠಾಣೆಯ ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಅರವಿಂದ ನಾಯಕನ ಪತ್ತೆಗೆ ಕ್ರಮ ಕೈಗೊಂಡಿದ್ದರು. ಗುರುವಾರ ಅರವಿಂದ ನಾಯಕನ ಶವ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣದ ಕಡತ ಪೂರ್ಣಗೊಂಡಿದೆ. ಆದರೆ ಸಾವಿನ ನಿಖರ ಕಾರಣಕ್ಕೆ ಮಾತ್ರ ಪೊಲೀಸರು ತೀವ್ರ ತನಿಖೆಗೆ ಕಾರ್ಯಪ್ರವೃತ್ತರಾಗಿದ್ದಾರೆ.
