ರಾಘು ಕಾಕರಮಠ.

ಅಂಕೋಲಾ : ಬಾತರೂಮ್ ಕಿಡಕಿಯಿಂದ ಮೋಬೈಲನಲ್ಲಿ ಯುವತಿಯೊಬ್ಬಳು ಸ್ನಾನ ಮಾಡುತ್ತಿರುವದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಯುವಕನ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ. ಅಂಕೋಲಾದ ದರ್ಶನ ರಾಮಾ ಗೌಡ ಬಂದಿತ ಆರೋಪಿಯಾಗಿದ್ದಾನೆ.

     ನಡೆದದ್ದೇನು..?

ಬೆಂಗಳೂರಿನಲ್ಲಿ ಹೊಟೇಲ ಮ್ಯಾನೆಜ್‌ಮೆಂಟ್ ಕೊರ್ಸ್ ಮಾಡುತ್ತಿರುವ 2 ಯುವತಿಯರು ಮತ್ತು 6 ಯುವಕರು ಸೇರಿ ಬೆಂಗಳೂರಿನಿAದ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದು ಗೋಕರ್ಣದ ಕುಡ್ಲೆ ಬೀಚ್‌ನಲ್ಲಿರುವ ಹೋಮ್ ಸ್ಟೇವೊಂದರಲ್ಲಿ ಉಳಿದುಕೊಂಡಿದ್ದರು.

ಯುವತಿ ಸೆ. ೨೬ ರ ಗುರುವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ಸ್ನಾನ ಮಾಡಲು ಬಾತರೂಮ್‌ಗೆ ತೆರಳಿದ್ದಾಳೆ. ಈ ವೇಳೆ ಹೋಮ್ ಸ್ಟೇದಲ್ಲಿ ಕೆಲಸಕ್ಕಿದ್ದ ಅಂಕೋಲಾ ದರ್ಶನ ರಾಮಾ ಗೌಡ ಬಾತರೂಮ್‌ನ ಕಿಡಕಿಯಿಂದ ನಿಧಾನವಾಗಿ ಮೋಬೈಲನ್ನು ಒಳಗೆ ಇಟ್ಟು ಸ್ನಾನ ಮಾಡುವ ದೃಶ್ಯವನ್ನು ಸೆರೆ ಹಿಡಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

     ಈ ಬಗ್ಗೆ ಹೋಮ್ ಸ್ಟೇನ ವೈದ್ಯ ಡಾ. ಶ್ಯಾಮ್ ದಯಾಲ್ ವಾಸುದೇವನ ನಾಯರ ಸಂತ್ರಸ್ತ ಯುವತಿಯ ಪರವಾಗಿ ದೂರು ನೀಡಿದ್ದಾರೆ. ಗೋಕರ್ಣ ಪೊಲೀಸ್ ಠಾನೆಯ ಪಿಎಸೈ ಸುಧಾ ಅಘನಾಶಿನಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಸಿಪಿಐ ವಸಂತ ಆಚಾರಿ ನೊಂದ ಯುವತಿಗೆ ನ್ಯಾಯ ಕೊಡಿಸುವಲ್ಲಿ ವಿಶೇಷವಾಗಿ ಶ್ರಮಿಸಿ ಕಾರ್ಯಪ್ರವೃತ್ತರಾಗಿರುವದು ಸಾರ್ವಜನಿಕ ವಲಯದಲ್ಲಿ ಪ್ರಶಂಸಗೆ ಪಾತ್ರವಾಗಿದೆ.