ರಾಘು ಕಾಕರಮಠ.

ಅಂಕೋಲಾ : ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರಾಜೇಶ ಹಮ್ಮಣ್ಣ ನಾಯಕ ಅವರ ಮೂಲ ಮನೆ ಬೇಲೆಕೇರಿಯಲ್ಲಿ ಸೋಮವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ರಾಜೇಶ ಹಣ್ಣಮ್ಮ ನಾಯಕ ಅವರು ಮೂಲತ ಅಂಕೋಲಾದ ಬೇಲೆಕೇರಿಯವರಾಗಿದ್ದು ಪ್ರಸ್ತುತ ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

ರಾಜೇಶ ನಾಯಕ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಬಲವಾದ ಆರೋಪದ ಮೇಲೆ ರಾಜೇಶ ನಾಯಕ ಅವರ ಕುಂದಾಪುರದಲ್ಲಿರುವ ಸ್ವಂತ ಮನೆ, ಉಡುಪಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಬೇಲೆಕೇರಿಯ ಜೈನ ಬೀರ ದೇವಸ್ಥಾನದ ಬಳಿ ಇರುವ ಮೂಲ ಮನೆಗೆ ಸೋಮವಾರ ಬೆಳಿಗ್ಗೆ ೬ ಗಂಟೆಯ ವೇಳೆಗೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಮಂಗಳೂರಿನ ಲೋಕಾಯುಕ್ತ ಇನ್ಸ್ಪೆಕ್ಟರ ಸುರೇಶಕುಮಾರ ಬಿ ನೇತ್ರತ್ವದಲ್ಲಿ ಆರು ಸಿಬ್ಬಂದಿಗಳನ್ನೊಳಗೊAಡ ತಂಡವು ಬೇಲೆಕೇರಿಯಲ್ಲಿ ದಾಳಿ ನಡೆಸಿದೆ. ಈ ವೇಳೆ ರಾಜೇಶ ಹಮ್ಮಣ್ಣ ನಾಯಕ ಅವರ ತಂದೆ- ತಾಯಿ ಮಾತ್ರ ಮನೆಯಲ್ಲಿದ್ದು ಅವರಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗುತ್ತಿದೆ.